Verse 1

ದೇವಾ ನೀನೆಮಗೊಲಿದು
ಕೊಡಾಶಿರ್ವಾದವನ್ನು.
ಪ್ರಸನ್ನ ಮುಖನಾಗಿದ್ದು
ಕಟಾಕ್ಷಿಸೈ ನಮ್ಮನ್ನು.
ಭೂಚಕ್ರ ನಿನ್ನ ಮಾರ್ಗವಂ
ಜನಾಂಗಗಳ ದೇಶ
ಹೊಸ್ತಾದ ನಿನ್ನ ರಕ್ಷಾಣಂ
ಕಣ್ಣಾರೆ ನೋಡಲೀಶ.
ಆಶ್ಚರ್ಯ ನಿನ್ನ ನ್ಯಾಯ.

Verse 2

ಯೆಹೋವಾ ನಿಂಗೆ ಸ್ತೋತ್ರವು
ಕೊಂಡಾಡು ಪ್ರಜೆಯೆಲ್ಲ.
ಸಂತೋಷದಿಂದ ಭಜಿಸು
ಇಂಪಾಗಿ ಲೋಕವೆಲ್ಲ.
ನೀ ನ್ಯಾಯತೀರ್ಪು ಮಾಡುತಿ
ಸಮಸ್ತ ರಾಜ್ಯದಲ್ಲಿ
ಪರಾಂಬರಿಸಿ ಆಳುತಿ
ಸಮಸ್ತ ನರರಲ್ಲಿ
ದಯಾಪ್ರಸಿದ್ಧರಾಜ.

Verse 3

ಕೊಂಡಾಡು ಪ್ರಜೆ ಈಶನ
ಕೊಂಡಾಡು ಪ್ರಜೆಯೆಲ್ಲ.
ದಿವ್ಯಾನುಗ್ರಹ ಭೂಮಿಯ
ಸಫಲ ಮಾಡುತ್ತಲ್ಲ.
ಯೆಹೋವಾ ನಮ್ಮ ದೇವರೇ
ನಿನ್ನಾಶೀರ್ವಾದ ಕೊಡು
ಭೂಮಂಡಲದ ಪ್ರಜೆಯೇ
ಆತಂಗೆ ಭಯ ಪಡು.
ತಥಾಸ್ತು. ಆಮೆನ್. ಆಮೆನ್.

Go to top