Verse 1

ಲೋಕ ಮೈಮೆ ಪಡಿಸೋ
ಚೈತ್ರ ಬರೋದೆಂದು?
ಇಷ್ಟು ಕಾಲ ಕಾಡಿಸೋ
ಚಳಿ ತೀರೋದೆಂದು?
ಹಾಳು ಬಿದ್ದ ಹೊಲದಿ
ಸಾರವನ್ನು ಹಾಸ
ಶಾಂತಿಯನ್ನು ಪಾಲಿಸಿ
ಬಾ ಬಾ ಚೈತ್ರಮಾಸ.

Verse 2

ಜಲದಿಂದ ನೈದಿಲೆ
ಅರಳುವ ರೀತಿ
ಲೋಕದಲ್ಲಿ ನಂಬಿಕೆ
ಸತ್ಯ ತಾಳ್ಮೆ ಪ್ರೀತಿ
ಈ ಪ್ರಶಸ್ತ ಹೂಗಳು
ಅರ್ಳುವಂತೆ ಧಾರೆ
ಸುರಿಸೆಂತ ಭಕ್ತರು
ದಾರಿ ನೋಡುತ್ತಾರೆ.

Verse 3

ಇನ್ನು ಬರಿಯಡವಿ
ತೋಟವಾದ ಮೇಲೆ
ಪೃಥ್ವಿ ಪುಷ್ಟ ಫಲದಿ
ತುಂಬುತಿರ್ವ ವೇಳೆ
ಸ್ತೋತ್ರಗಾನ ಏಳ್ವದು
ಪ್ರತಿ ಗೃಹದಿಂದ
ದೇವರೊಲಿಯುವನು
ಸ್ವರ್ಗ ಲೋಕದಿಂದ.

Verse 4

ಸರ್ವಲೋಕ ಕರ್ತನೇ
ಮೂರ್ತಿಸೇವೆ ಬಿಟ್ಟು
ಇನ್ನು ನಿನ್ನ ಮೇಲೆಯೇ
ಸದ್ವಿಶ್ವಾಸವಿಟ್ಟು
ನಿನ್ನ ಪೀಠಕೆರಗಿ
ನಿನ್ನ ಪಾದ ಸೇವೆ
ಮಾಡೋ ಕಾಲ ಬರಲಿ
ಎಂತ ಕಾಯುತ್ತೇವೆ.

Go to top