Verse 1

ಈ ಕಾರ್ಯ ಕ್ರಿಸ್ತ ನಿನ್ನದು
ನೀ ಕೊಟ್ಟಿ ನಮಗೆ.
ವಿನಾಶ ಬಾರದೆಂದಿಗು
ನೀನಾಳ್ವ ಕಾರ್ಯಕೆ.
ನಿಂಗಿಪ್ಪ ಪ್ರತಿ ಸೇವಕ
ಭೂಮಿಲಿ ಬಿದ್ದ ಗೋದಿಯ
ಹಾಗಿದ್ದು ಸತ್ತು ಫಲವ
ತಂದೀವನಿದು ನೇಮಕ
ಬಾ ಮರಣ
ಬಾ ಇಷ್ಟ ಮರಣ.

Verse 2

ನೀ ಹೋದ ಶ್ರಮ ಮಾರ್ಗದಿ
ಸಮ್ರಾಜ ನಮ್ಮನು
ವಿಶ್ರಾಂತಿವಾಸ ಕೊಯ್ಯುತಿ.
ನಿನ್ನಂತೆ ಶಿಷ್ಯರು
ಹಾ ಶ್ರಮ ಜಯ ಎರಡು
ನಮ್ಮೆಲ್ಲರಿಂಗೆ ಪಾಲಿಸು
ನಿನ್ ಕಾರ್ಯದೊಡ ನಮ್ಮನು
ನೀನಿರ್ವ ಓಜಕೇರಿಸು
ನಿನ್ನೋಜಕೆ
ನಿನ್ನೋಜಸ್ಥಾನಕ್ಕೆ.

Verse 3

ನೀ ಗೋದಿಬೀಜದಂತೆಯೆ
ಭೂಗರ್ಭಕಿಳಿದು
ಭೂರಾಜನಾಗಿ ಏರಿದೆ
ಭೂರಾಜ್ಯ ಪಾಲಿಸು.
ಕೊಡಯ್ಯ ಹೆಚ್ಚು ಆಳ್ಗಳ
ನಿನ್ನತಿ ಶುಭನಾಮವ
ಒಂದೊಂದು ದೇಶದಲ್ಲಿಯು
ಸಂಕೀರ್ತಿಯನ್ನು ಪಡಿಸು
ನಮ್ಮಿಂದಲು
ಸಂಕೀರ್ತಿಪಡಿಸು.

Go to top