Verse 1

ಚೀಯೋನು ಕೋಟೆಗೋಡೆಯಲ್ಲಿ
ನಿಂತ್ಹಗಲಿರ್ಳು ಕೂಗುತ್ತಿದ್ದಂಥ
ಆರಂಭಸಾಕ್ಷಿಗಾರರಲ್ಲಿ
ಪ್ರವರ್ತಿಸಿದ ಕೃಪಾದಾಯಕ
ದಿವ್ಯಾತ್ಮ ಏಳು ದೇವತೂರ್ಯವೆ
ಗಟ್ಟ್ಯಾಗಿ ಊದು ಜಗದೊಳಗೆ.

Verse 2

ನಿನ್ನಗ್ನಿ ಸರ್ವ ಲೋಕದಲ್ಲಿ
ಪ್ರಜ್ವಾಲೆಯಾದರೆಷ್ಟೊ ಒಳ್ಳೇದು
ಸಂರಕ್ಷೆ ಎಲ್ಲ ಜನರಲ್ಲಿ
ಪ್ರಖ್ಯಾತಿಯಾದರೆಂಥ ಸೌಖ್ಯವು
ಐ ಬೆಳೇ ಯಜಮಾನ ದೃಷ್ಟಿಸು
ಪೈರೆಷ್ಟೋ ಎಷ್ಟೋ ಕೊಂಚ ಆಳ್ಗಳು.

Verse 3

ಸುವಾರ್ತೆ ಸಾರೋ ಶೂರರನ್ನು
ಗುಂಪಾಗಿ ಕರ್ತ ಇನ್ನು ಕಳುಹು
ಈಯ್ ಶೀರ್ಘವಾಗಿ ಜಯವನ್ನು
ಸೈತಾನರಾಜ್ಯ ಬೇಗ ಭಂಗಿಸು.
ಭೂಚಕ್ರದಲ್ಲಿ ಕಟ್ಟಿ ರಾಜ್ಯವ
ನಿನ್ ಹೆಸರೆತ್ತು ಬೇಗ ಒಡೆಯ.

Verse 4

ಸುವಾರ್ತಾ ಸೂರ್ಯ ತೇಜ ಮೂಡಿ
ದುಷ್ಟಾಂಧಸೇನೆಯೆಲ್ಲ ಜೈಸಲಿ
ಗುಂಪಾಗಿ ಜನರೆಲ್ಲ ಕೂಡಿ
ನಿನ್ನಡಿಗಡ್ಡ ಬೀಳ ಬರಲಿ
ನಿದ್ದೇಲಿ ಬಿದ್ದ ಭ್ರಾಮ ಸಂತತಿ
ಸ್ವರಾಜ್ಯ ತೂರ್ಯ ಕೇಳಿ ಏಳಲಿ.

Verse 5

ನಿನ್ನಗ್ನಿಯಿಂದ ನಮ್ಮ ಪ್ರೀತಿ
ಹೊತ್ತಿರ್ವ ಚಿಕ್ಕ ಅಗ್ನಿಕಣವೇ
ನಿಂಗಿರ್ವ ಮಮಕಾರರೀತಿ
ಅತುಲ್ಯ ನೀನು ದೇವಪ್ರೀತಿಯೇ
ನಮ್ಮಲ್ಲಿ ಬೇಡೋ ಪ್ರೀತಿ ಸಣ್ಣದು
ಅನಂತ ನಿನ್ನ ಪ್ರೀತಿಕಾರ್ಯವು.

Verse 6

ಪೂರೈಸು ನಿನ್ನ ಕಾರ್ಯವನ್ನು
ಭೂಲೋಕನ್ಯಾಯಾಧೀಶ ರಕ್ಷಕ
ಮನುಷ್ಯ ಜಾತಿಭಾಧೆಯನ್ನು
ನಿವಾರೆಸೈ ವಿಶುದ್ಧ ಒಡೆಯ
ವಿಶ್ವಾಸ ಬೇಡೋದನ್ನು ಬಿಡದು
ಹೆಚ್ಚೀಯುವಿ ಬೇಡಿದ್ದಕ್ಕಿಂತಲು.

Go to top