Verse 1

ಕರ್ತ ನೊಡು ಭೂಮಿಯಲ್ಲಿ
ಎಷ್ಟೋ ಅಂಧಕಾರವು
ಬೆಳ್ಕು ಗಾಢ ಕತ್ತಲಲ್ಲಿ
ಸ್ವಲ್ಪ ಮಾತ್ರ ಕಾಣ್ಬುದು
ಎಷ್ಟೋ ಜನ ಭ್ರಮಿಸಿ
ಮೂಕ ಬೊಂಬೆಗೆರಗಿ
ದಿಕ್ಕು ತಪ್ಪಿ ಹೋಗಿದ್ದಾರೆ
ವ್ಯರ್ಥ ಕಷ್ಟ ಪಡುತ್ತಾರೆ.

Verse 2

ಎಂದು ಹೋಗೋದಂಧಕಾರ?
ಎಂದು ಸೂರ್ಯನೇರ್ವನು?
ಎಂದು ಶುಭಸಮಾಚಾರ
ಬೆಳಕನ್ನು ಹೋಯ್ವದು?
ಸತ್ಯಜ್ಞಾನ ಮರೆತು
ಮೂರ್ಖರಾದ ಜನರು
ನಿನಗೆಂದು ವಂದಿಸ್ಯಾರು?
ಕ್ಷೇಮವೆಂದು ಪಡೆದಾರು?

Verse 3

ಏಳು ಘೋರ ಪಾಪಭಾರ
ನೀಗು ಕೃಪೆಯರಸೇ.
ರಾತ್ರಿ ಪೂರ್ವ ಪರಿಹಾರ
ಮಾಡು ನೀತಿಸೂರ್ಯನೇ.
ನಿನ್ನ ವಾಕ್ಯ ಬೇಗನೇ
ಹಬ್ಬಿಸೆಮ್ಮ ಕರ್ತನೇ.
ಹೆಣ ಜೀವಿಯಾಗ ಮಾಡು
ಸುಡು ಪಾಪವೆಂಬ ಕಾಡು.

Verse 4

ಕರ್ತ ನೀಡು ಸಿದ್ಧಿಯನ್ನು
ನಿನ್ನ ಸೇವಾಜನಕೆ.
ವರ್ಧಿಸೊಳ್ಳೆ ಫಲವನ್ನು
ಸತ್ಯದಿಂದ ನುಡಿಗೆ.
ಪರಿಪೂರ್ಣ ಜಯಕೆ
ಮಾರ್ಗ ಮಾಡು ಕರ್ತನೆ.
ನಿನ್ನ ತ್ರಾಣ ಕುಂದೋದಿಲ್ಲ
ನಿನ್ನ ರಾಜ್ಯಕಂತ್ಯವಿಲ್ಲ.

Go to top