Verse 1

ತಂದೆಯಾದ ದೇವರೆ
ನಮ್ಮಲ್ಲಿ ವಾಸಮಾಡು
ಪಾಪ ಮನ್ನಿಸೆಮಗೆ
ಆತ್ಮಂಗಳಂ ಕಾಪಾಡು
ಮುಕ್ತಿ ಕೊಡು ತಂದೆಯೆ
ಪಿಶಾಚನನ್ನು ಜೈಸಿ
ಸದಾ ವಿಶ್ವಾಸವಾಗಿ
ನಿನ್ನಲ್ಲಿ ನೆಲೆಯಾಗಿ
ಎಲ್ಲ ಸಭೆಯೊಂದಿಗೆ
ದಿವ್ಯಾಯುಧಂ ಕೊಳ್ಳೋಣ
ಹೋರಾಟ ತೀರಿಸೋಣ
ಕಿರೀಟ ಪಡೆಯೋಣ
ಹಲ್ಲೆಲೂಯ ನಿನ್ನಲೇ
ಸಂರಕ್ಷೆ ಸ್ಥಿರವಾದದೇ.

Verse 2

ಕರ್ತ ಯೇಸು ಕ್ರಿಸ್ತನೆ
ನೀ ಸರಿಯಾದ ಹಾದಿ
ಸತ್ಯ ದೇವವಾಕ್ಯವೆ
ನೀನೆಮ್ಮ ಮರೆಯಾದಿ
ನೀನು ಸತ್ತು ನಮಗೆ
ಆ ಜೀವರಾಜ್ಯ ಕೊಂಡಿ
ನಿನ್ನಲ್ಲಿ ಜೀವಕಾಂತಿ
ನಿನ್ನಲ್ಲಿ ಸತ್ಯಶಾಂತಿ
ನೀನು ದಿವದನ್ನವೆ
ನಿನ್ನಲ್ಲಿ ನೀತಿಜ್ಞಾನ
ನೀನೆಮ್ಮ ಯಜಮಾನ
ನೀನೆಮ್ಮ ಸಮಾಧಾನ
ಶುದ್ಧ ಕನ್ಯಾಪುತ್ರನೆ
ಅನಂತ ಸ್ತೋತ್ರ ನನಗೆ.

Verse 3

ಪಿತಾಪುತ್ರರೊಂದಿಗೆ
ಸಮಾನವಾದ ಮಾನ
ಹೊಂದತಕ್ಕ ಆತ್ಮನೆ
ತಾರೈ ವಿಶ್ವಾಸದಾನ
ಚಿಂತಾಕ್ರಾಂತ ಮನಕೆ
ನೀ ನೀಡು ಕ್ಷೇಮವನ್ನು
ನನ್ನಪ್ಪ ತಂದೆ ಕೇಳು
ಎಂದನ್ನ ಬುದ್ಧಿ ಹೇಳು
ಸತ್ಯ ವೃದ್ಧಿಕಾರ್ಯಕೆ
ಸದಾ ಸಹಾಯ ಮಾಡು
ಸದ್ಭಕ್ತರಂ ಕಾಪಾಡು
ಸೈತಾನಗೆದುರಾಡು
ಹಲ್ಲೆಲೂಯ ಆತ್ಮನೆ
ನಿವಾಸ ಮಾಡೆಮ್ಮೊಳಗೆ.

Go to top