Verse 1

ಹಲ್ಲೆಲೂಯ ಕೊಂಡಾಡುವ
ಸರ್ವಾಧಿಕಾರಿ ದೇವರ
ನಾಮಾಧಿನಾಮವನ್ನು
ಭೂಪರಲೋಕ ಹಾಡಲಿ
ಸಾಷ್ಟಾಂಗ ಬಿದ್ದು ದೈನ್ಯದಿ
ಯೆಹೋವ ಕೀರ್ತಿಯನ್ನು.
ಆತ ನಾಥ
ಸೈನ್ಯಪತಿ
ಆತನತಿ
ಪರಿಶುದ್ಧ
ಪರಿಶುದ್ಧ ಪರಿಶುದ್ಧ.

Verse 2

ಹಲ್ಲೆಲೂಯ ಸನ್ಮಾನಿಸಿ
ಕ್ರಿಸ್ತ್ಯೇಸುವಂ ಕೊಂಡಾಡಿರಿ
ಶ್ರೀದೇವಪುತ್ರನನ್ನು.
ಪವಿತ್ರ ರಕ್ತದಿಂದಲೂ
ಕಠೋರ ಮೃತ್ಯುವಿಂದಲೂ
ಸ್ವಕೀಯ ಪ್ರಜೆಯನ್ನು
ಕೊಂಡುಕೊಂಡು
ದಿವ್ಯ ಪ್ರೀತಿ
ಶುದ್ಧ ನೀತಿ
ತಂದಿದ್ದಾನೆ
ರಾಜನಾಗಿ ಆಳುತಾನೆ.

Verse 3

ಹಲ್ಲೆಲೂಯ ಕೊಂಡಾಡಿರಿ
ದಿವ್ಯಾತ್ಮ ಪುನರ್ಜನ್ಮದಿ
ನಮ್ಮಲ್ಲಿ ಬಂದಿದ್ದಾನೆ.
ನಮ್ಮೊಳ್ ವಿಶ್ವಾಸ ಹುಟ್ಟಿಸಿ
ಕ್ರಿಸ್ತ್ಯೇಸುವಿನ ಐಕ್ಯದಿ
ಸಂತೃಪ್ತಿ ಕೊಡುತಾನೆ.
ಬರ್ರಿ ತರ್ರಿ
ಸ್ತೋತ್ರವನ್ನ
ಪರಮಾನ್ನ
ದಿವ್ಯ ಪೋಷ
ಹೊಂದಿ ಪಡಿರಾತ್ಮತೋಷ.

Verse 4

ಹಲ್ಲೆಲೂಯ ಕೊಂಡಾಡುವ
ಪಿತಾಪುತ್ರಾತ್ಮ ದೇವರ
ತ್ರಿಯೇಕ ನಾಮವನ್ನು
ದುತಾದಿ ಸೈನ್ಯದೊಂದಿಗೆ
ಸದ್ಭಕ್ತಿಯಿಂದ ಆತಗೆ
ಸಂಗೀತ ಸ್ತುತ್ತಿಯನ್ನು
ಮಾಡ ಹಾಡ
ಬನ್ನಿರೆಲ್ಲ
ಸೃಷ್ಟಿಯೆಲ್ಲ
ಹೇಳಲಾಮೆನ್
ದೇವರೆಮ್ಮ ಪ್ರಭು. ಆಮೆನ್.

Go to top