Verse 1

ಇನ್ನುಂಟೋ ತೃಪ್ತಿ ಆತ್ಮಕೆ
ನಿನ್ಹೊರ್ತ ಪ್ರಿಯ ತಂದೆಯೆ?
ನನ್ನುತ್ತಮಾತ್ಮತೋಷ
ನಿನ್ನನ್ನು ಬಿಟ್ಟ ಸುಖವು
ನೀ ಕೊಡದಂಥ ಬೆಳಕು
ಇದ್ದಲ್ಲಿ ಎಂಥ ಪೋಷ?
ಸತ್ಯ ನಿತ್ಯ
ಸಮಾಧಾನ
ವಾಸಸ್ಥಾನ
ಪಾಪಗಾರ
ನಿನ್ನ ಬಿಟ್ಟು ಹೊಂದಲಾರ.

Verse 2

ಇನ್ನುಂಟೊ ತೃಪ್ತಿ ಆತ್ಮಕೆ
ನೀನಲ್ಲದೆ ಕ್ರಿಸ್ತ್ಯೇಸುವೆ
ಪ್ರಪಂಚಕಾಡಿನಲ್ಲಿ?
ನೀ ನನ್ನ ಬಿಟ್ಟು ಬಿಟ್ಟರೆ
ನಾ ದಿಕ್ಕು ಕಾಣದಿರುವೆ
ಭೂಪರಲೋಕದಲ್ಲಿ.
ಯೇಸು ಲೇಸು
ಕೃಪೆಯಾಗಿ
ಕೊಡಲಾಗಿ
ಇಲ್ಲಿ ಏನು
ಅಲ್ಲಿ ಏನು ಆಶಿಸ್ಯೇನು?

Verse 3

ಇನ್ನುಂಟೋ ತೃಪ್ತಿ ಆತ್ಮಕೆ
ನೀನಲ್ಲದೆ ದೇವಾತ್ಮನೆ?
ನೀ ಶಾಂತಿಕರ ಮಿತ್ರ
ನೀ ಜ್ಞಾನತೇಜದಿಂದಲೆ
ಪ್ರಕಾಶವೀಯದಿದ್ದರೆ
ನಾನಾಗೆನೈ ಪವಿತ್ರ.
ವರ ಪರ
ಮಿತ್ರ ನನ್ನ
ಆತ್ಮವನ್ನ
ಕೃಪೆಯಾಗಿ
ಕಾಯು ನಿತ್ಯಜೀವಕಾಗಿ.

Go to top