Verse 1

ನಾವೇಕ ದೇವರಲ್ಲಿಯೆ
ಏಕವಾಗಿ ನಂಬುತ್ತೇವೆ
ತ್ರಯ್ಯೆಕನೆಂಬ ಕರ್ತಗೆ
ಒಪ್ಪಲೀಗ ನಮ್ಮ ಸೇವೆ.
ತಂದೆ ಎಲ್ಲವುಂಟು ಮಾಡಿ
ಸರ್ವರಾಜ ಸರ್ವತ್ರಾಣಿ
ಪರಿಶುದ್ಧ ಸರ್ವಜ್ಞಾನಿ
ಆಗಿ ಸೃಷ್ಟಿಯಂ ಕಾಪಾಡಿ
ಈ ಲೋಕವನ್ನು ರಕ್ಷಿಸ
ಆದೀಲಿ ಮನ ಮಾಡಿದ.
ಆಮೆನ್.

Verse 2

ಕ್ರಿಸ್ತೇಸು ಕರ್ತನಲ್ಲಿಯು
ನಂಬುತೇವೆ ಭಕ್ತರಾಗಿ.
ಸ್ವಕೀಯ ಪಿತಗೀತನು
ಆದಿಯಿಂ ಸಮಾನನಾಗಿ
ಶುದÀ್ಧಳಾದ ಕನ್ಯೆಯಿಂದ
ಹುಟ್ಟಿ ಸದ್ಮನುಷ್ಯನಾಗಿ
ಕೆಟ್ಟು ಹೋದ ನಮಗಾಗಿ
ಸತ್ತು ಗೋರಿಯೊಳಗಿಂದ
ಎದ್ದೇರಿ ಘನದೊಡನೆ
ಬರೋನು ನ್ಯಾಯದಿನಕೆ.
ಆಮೆನ್.

Verse 3

ಪವಿತ್ರ ಆತ್ಮನಲ್ಲಿಯು
ತದ್ವಿಶ್ವಾಸವಿಡುತೇವೆ
ಈತಂಗು ದೇವ ಭಾವವು
ತಕ್ಕದಿತಗೆಮ್ಮ ಸೇವೆ.
ಹೃದ್ವಿಶ್ರಾಂತಿಯೆಂಬ ದಾನ
ಭಕ್ತಗೀತ ಕೊಡಲಾಪ
ಆಳಿಸೋನು ನಮ್ಮ ಪಾಪ
ಆತನಿಂದ ದೇಹೋತ್ಧಾನ
ಸದ್ಭಕ್ತಗಣವೇ ಸದಾ
ಯೆಹೋವಸ್ತೋತ್ರ ಮಾಡುವಾ.
ಆಮೆನ್.

Go to top