Verse 1

ಕರ್ತಾ ದಿವ್ಯ ದೃಷ್ಟಿಯನ್ನ
ಮೇಲಿನಿಂದ ಸುರಿಸು.
ಒಣ ನೆಲದಂಥ ನನ್ನ
ಹೃದವನ್ನು ನೆನಸು.
ನಿನ್ನ ಆತ್ಮ ದೇವರೇ
ಇಷ್ಟವಾದ ಮಳೆಯೇ
ಆತ್ಮವೃಷ್ಟಿ ಬಿದ್ದ ಮನ
ನಿಂಗೆ ಪುಷ್ಪವಿವ ವನ.

Verse 2

ರೊಟ್ಟಿಯನ್ನು ಕೇಳುವಲ್ಲಿ
ಮಕ್ಕಳಿಂಗೆ ಕಲ್ಲನ್ನೇ
ಕೆಟ್ಟ ನರಜಾತಿಯಲ್ಲಿ
ತಂದೆಯೊಬ್ಬ ಕೊಟ್ಟಾನೇ?
ಒಳ್ಳೇ ತಂದೆಯಾದ ನೀ
ನನ್ನ ಮೊರೆ ಕೇಳುವಿ
ಆತ್ನದಾನ ನಂಗೆ ದಯ
ಪಾಲಿಸಿ ಕಟಾಕ್ಷಿಸಯ್ಯ.

Verse 3

ಇಹ ಬಿಟ್ಟು ಸ್ವರ್ಗವನ್ನು
ಐದಿದಾಗ ನಿಮಗೆ
ತಂದೆಯಿಂದ ವರವನ್ನು
ಪಡಕೊಂಡು ಹಂಚುವೆ
ಎಂದು ಕೊಟ್ಟ ಭಾಷೆಯ
ನೆರವೇರಿಸೊಡೆಯ
ಸತ್ಯವಾದ ಆತ್ಮನನ್ನು
ಕೊಟ್ಟು ಆದರಿಸೆನ್ನನ್ನು.

Verse 4

ಬಲಹೀನರಿಂಗೆ ಕ್ಷೇಮ
ದ್ವೇಷಮಯ ಲೋಕಕ್ಕೆ
ಪ್ರೀತಿ ಎಂಬ ದಿವ್ಯ ನೇಮ
ಒದಗಿಸುವಾತ್ಮನೆ
ನಿನ್ನ ಗೃಹ ನಾನಲ್ಲಾ
ತೇಜೋಪ್ರದನಾಗಿ ಬಾ
ಪಾಪ ಹೊರಗೆ ಬಿಸಾಡು
ಒಳಗೆಲ್ಲಾ ಶುದ್ಧ ಮಾಡು.

Verse 5

ದಿವ್ಯ ಸದ್ಗುಣಂಗಳಿಂದ
ನನ್ನನ್ನಲಂಕರಿಸಿ
ಆತ್ಮದಲ್ಲಿ ಸತ್ಯದಿಂದ
ತಂದೆಯನ್ನು ಸೇವಿಸಿ
ಬೇಡುವಂತೆ ಕಲಿಸು
ಶ್ರದ್ಧೆ ದೃಢ ಪಡಿಸು
ಬಂದೆನ್ನೊಳಗೆ ಬೀಸು ವಾಯು
ಪೂರ್ಣ ನವ ಸೃಷ್ಟಿಗೈಯು.

Verse 6

ಹೀಗೆ ನಿಂಗಾಧಿನನಾಗಿ
ಭೂಸಂಚಾರಗೈವೆನು
ಸ್ವರ್ಗದ್ವಾರ ಸೇರಲಾಗಿ
ನನ್ನ ಮುಕ್ತ ಮನವು
ಪಿತಾಪುತ್ರರೊಡನೆ
ನಿಂಗೆದೇವರಾತ್ಮನೆ
ಸ್ತೋತ್ರಧೂಪವರ್ಪಿಸೋದು
ನಿತ್ಯದಲ್ಲಿ ಕೀರ್ತಿಸೋದು.

Go to top