Verse 1

ನಾ ರಮ್ಯ ನದ ಬಲ್ಲೆ
ಈ ನದಜಲವು
ಆ ಪರಲೋಕದಲ್ಲೆ
ಉಗಮವಾದದು.
ಈ ನದ ಬತ್ತಲಾರ
ಹರ್ಯುತ್ತಲಿಹುದು
ಈ ಜೀವಜಲಧಾರ
ಇನೇರುವಂಥಾದು.

Verse 2

ಅಬ್ರಾಮವಂಶದಿಂದ
ಕ್ರಮೇಣ ಮುಂದಕು
ಹರ್ಯುತಲಿದ್ದರಿಂದ
ಬಂದುಂಟು ನಮಗು
ಇನ್ನಿಲ್ಲ ನರಭೇದ
ಒಂದೊಂದು ಜಾತಿಗು
ಈ ಜೀವಜಲ ಸೇದ
ಬಂತನುಕೂಲವು.

Verse 3

ಈ ಜಲ ಬರುವಾಗ
ಆಹಾ ವಸಂತವೆ
ಈ ಜಲ ಬಿದ್ದ ಜಾಗ
ಹೂ ಹಣ್ಣು ಬಿಡುತೆ
ಒಂದೊಂದು ತೀರದಲ್ಲಿ
ಅಸಂಖ್ಯ ವೃಕ್ಷವು
ಒಂದೊಂದು ತಿಂಗಳಲ್ಲಿ
ಉತ್ಕøಷ್ಟ ಫಲವು.

Verse 4

ಬಾ ಮಿತ್ರ ಈ ಪ್ರವಾಹ
ಸುಕ್ಷೇಮಕರವೇ.
ಬಾ ಮಿತ್ರ ನಿನ್ನ ದಾಹ
ಸಂಪೂರ್ಣ ತೀರುತ್ತೆ.
ನಿನ್ನೆಲ್ಲ ಪಾಪಮಲ
ನಿವಾರವಹುದು.
ಇನ್ನೊಂದು ತೀರ್ಥವಲ್ಲ
ಈ ತೀರ್ಥ ತೀರ್ಥವು.

Go to top