Verse 1

ಕರ್ತ ನಿನ್ನ ಆತ್ಮವನ್ನು
ಕೊಡು ನಿನ್ನ ಪ್ರಜೆಗೆ
ಕೇಳು ನಮ್ಮ ಮೊರೆಯನ್ನು
ಸೇರು ನಮ್ಮ ಮದ್ಯಕೆ.

Verse 2

ನಮ್ಮ ದುಃಸ್ವಾಭಾವವನ್ನು
ನಮ್ಮೊಳಿಂದ ತೆಗೆದು
ನಮ್ಮ ಕೆಟ್ಟ ಹೃದವನ್ನು
ಹೊಸದಾಗಿ ನಿರ್ಮಿಸು.

Verse 3

ನಿನ್ನ ನೀತಿಮಾರ್ಗದಲ್ಲಿ
ನಡಕೊಳ್ಳೋ ಬುದ್ಧಿಯ
ಕೊಟ್ಟದನ್ನು ನೀನೆಮ್ಮಲ್ಲಿ
ಸ್ಥಿರಪಡಿಸೊಡೆಯ.

Verse 4

ಶಾಂತಿಯನ್ನು ಹೃದದಲ್ಲಿ
ಧಾರೆಯಾಗಿ ಸುರಿಸು.
ನಾವು ಭರವಸದಲ್ಲಿ
ದೃಢವಾಗಗೊಡಿಸು.

Verse 5

ನಿನ್ನ ಪ್ರೀತಿ ಜ್ಞಾನವನ್ನು
ಹೃದದಲ್ಲಿ ಹೊಯಿದು
ನಿನ್ನ ಮಕ್ಕಳಂತೆಮ್ಮನ್ನು
ಈಗಲೇ ಸ್ವೀಕರಿಸು.

Go to top