Verse 1

ಪರಿಶುದ್ಧ ಆತ್ಮನೆ
ಪಾಪ ಶಾಪ ತುಂಬಿದ
ನನ್ನ ಅಂತರ್ಭಾವನೆ
ಪೂರ್ಣ ಶುದ್ಧ ಮಾಡ ಬಾ.

Verse 2

ಜೀವವುಳ್ಳ ಆತ್ಮನೆ
ನನ್ನಲ್ಲಾತ್ಮ ಶಕ್ತಿಯ
ಹೆಚ್ಚು ಮಾಡು ಮೋಕ್ಷಕೆ
ಮುಟ್ಟ ಕೊಡು ವರವ.

Verse 3

ತ್ರಾಣವುಳ್ಳ ಆತ್ಮನೆ
ಪಾಪಬಲ ಮುರಿದು
ನನ್ನ ಹೃದಸಿದ್ಧಿಗೆ
ಸತ್ಯಗುಣ ಪಾಲಿಸು.

Verse 4

ಜ್ಞಾನವುಳ್ಳ ಆತ್ಮನೆ
ಜ್ಞಾನವನ್ನು ಮೂಡಿಸ
ನನ್ನ ಹೃದದಿಂದಲೆ
ಹಾರಿಸಂಧಕಾರವ.

Verse 5

ಬುದ್ಧಿಯುಳ್ಳ ಆತ್ಮನೆ
ದೇವವಾಕ್ಯ ಗ್ರಹಿಸ
ಬುದ್ಧಿಹಿನನೆನಗೆ
ಕೊಡು ತಕ್ಕ ಬುದ್ಧಿಯ.

Verse 6

ಶುದ್ಧ ಆಗ್ನಿಯಾತ್ಮನೆ
ಸುಟ್ಟು ಹಾಕು ಸರ್ವದಾ
ನನ್ನ ಪಾಪ ಮೈಲಿಗೆ
ಬೆಳಗಿಸು ಹೃದವ.

Verse 7

ಪ್ರಾರ್ಥನೆಯ ಆತ್ಮನೆ
ಜಪ ದ್ಯಾನ ಕಲಿಸು
ಭಕ್ತಹೃದಜ್ಯೋತಿಯೆ
ನನ್ನೊಳ್ ತಳತಳಿಸು.

Verse 8

ಸತ್ಯವಾದ ಆತ್ಮನೆ
ಮಿಥ್ಯದಿಂದ ರಕ್ಷಿಸು
ಎಲ್ಲಾ ಸತ್ಯದೊಳಕೆ
ನೀನು ನಡಿಸೆನ್ನನು.

Verse 9

ಶಾಂತಿದಾಯಕಾತ್ಮನೆ
ಭಯ ಪೀಡೆ ಕಷ್ಟದೊಳ್
ಆದರಿಸು ತಪ್ಪದೆ
ಇಹಲೋಕಯತ್ರೆಯೊಳ್.

Go to top