Verse 1

ಪವಿತ್ರ ದೇವರಾತ್ಮವೇ
ನೀ ಭಕ್ತ ಹೃದಸೂರ್ಯನೇ
ನಮ್ಮೊಳ್ ಪ್ರವೇಶವಾಗು.
ನಮ್ಮಂತರ್ಭಾವದೊಳಗೆ
ಉದೈಸಿ ನಿತ್ಯ ಕಾಲಕೆ
ಪ್ರಕಾಶಪ್ರದನಾಗು.
ಆತ್ಮ ಆತ್ಮ
ಸತ್ಯಜ್ಞಾನ
ನಿನ್ನ ದಾನ
ನಿನ್ನ ಕಾಂತಿ
ನಮ್ಮ ನಿತ್ಯವಾದ ಶಾಂತಿ.

Verse 2

ಪವಿತ್ರವಾದ ಬುಗ್ಗೆಯೆ
ನೀ ಎರೆ ಆತ್ಮದಾಹಕೆ
ಸಜ್ಜೀವಜಲವನ್ನು.
ನಮ್ಮನ್ನು ಚಂದ ತೊಳೆದು
ನಮ್ಮೊಳಗಿಂದ ಬಿಡಿಸು
ಅಸಹ್ಯ ಮಲವನ್ನು.
ಎರೆ ಎರೆ
ಪಾನಕಾಗಿ
ಸ್ನಾನಕಾಗಿ
ಜಲವನ್ನು
ಮಾಡು ಪೂರ್ಣ ತೃಪ್ತಿಯನ್ನು.

Verse 3

ಪವಿತ್ರವಾದ ಅಗ್ನಿಯೆ
ನಮೊಳಗಿರ್ವ ಮೈಲಿಗೆ
ಸುಟ್ಠಾಕು ವೇಗದಿಂದ.
ಸೈತಾನನಧಿಕಾರವಂ
ನಮ್ಮೊಳಗಿರ್ವ ರಾತ್ರಿಯಂ
ನೀ ದಿವ್ಯ ಜ್ವಾಲೆಯಿವಂದ
ಛಿನ್ನ ಭಿನ್ನ
ಮಾಡಲಾಗಿ
ಸಿದ್ಧರಾಗಿ
ನಿನ್ನ ಸೇವೆ
ಮಾಡ ತ್ವರೆ ಪಡುತೇವೆ.

Go to top