Verse 1

ದೇವರಾತ್ಮವೆ
ಬಂದೆನ್ನೊಳಗೆ
ದುಃಸ್ವಭಾವಮೂಲ ಕಿತ್ತು
ಮನದೊಳ್ ಸುಬೋಧೆ ಇತ್ತು
ನನ್ನ ಹೃದಯ
ಶುಚಿ ಮಾಡಯ್ಯಾ.

Verse 2

ಬೀಸು ವಾಯುವೇ
ಸುರಿ ಮಳೆಯೇ
ಕೋಲೆ ಬಂಡೆಯನ್ನು ಸೀಳು
ಖಡ್ಗ ಮಾಂಸದಲ್ಲಿ ಬೀಳು
ಉರಿ ಆಗ್ನಿಯೇ
ಮೂಡು ಸೂರ್ಯನೇ.

Verse 3

ನನ್ನ ಆತ್ಮದಿ
ಜ್ಞಾನ ಹುಟ್ಟಿಸಿ
ನನ್ನ ಇಂದ್ರಿಯಂಗಳನ್ನು
ನನ್ನ ಪೂರ್ಣ ಮನಸ್ಸನ್ನು
ಹಿಡಿದೆನ್ನನ್ನು
ಪೂರ ವ್ಯಾಪಿಸು.

Verse 4

ನೀನು ಬೋಧನೆ
ನನಗಿತ್ತರೆ
ಜೀವದುಪದ್ರಂಗಳನ್ನು
ಮೃತಿಘೋರ ಭಯವನ್ನು
ಲಕ್ಷ್ಯ ಮಾಡದೆ
ಜಯ ಹೊಂದುವೆ.

Go to top