Verse 1

ಆಲೈಸು ಶ್ರೀ ಪವಿತ್ರಾತ್ಮನೇ
ವಿಶ್ವಾಸದೃಢವ ನಮಗೆ
ದಯೆಪಾಲಿಸೀಗ
ಭೂಕಷ್ಟವನ್ನು
ಬಿಟ್ಟೋಗೋ ಕಾಲದಿ ಭಕ್ತರನ್ನು
ಕಟಾಕ್ಷಿಸೋ.

Verse 2

ಇಂಪಾದ ಜ್ಯೋತಿಯೆ ನಮ್ಮಲ್ಲಿ
ಕ್ರಿಸ್ತ್ಯೇಸುನಾಮವ ತಿಳಿಸಿ
ಆತನೈಕ್ಯದಿಂದ
ಸ್ವತಂತ್ರವನ್ನು
ತಕ್ಕೊಳ್ಳ ಬಯ್ಸುವ ಮಕ್ಕಳನ್ನು
ಕಟಾಕ್ಷಿಸೋ.

Verse 3

ಅಮೂಲ್ಯ ಪ್ರೀತಿಯೇ ನಮ್ಮೊಳು
ಪ್ರೇಮಾಗ್ನಿ ಜ್ವಾಲೆಯ ಹೊತ್ತಿಸು
ಸರ್ವ ಭಕ್ತರಲ್ಲಿ
ಅನ್ಯೋನ್ಯವನ್ನು
ಹೆಚ್ಚಾಗಮಾಡುತ್ತಾ ಸಭೆಯನ್ನು
ಕಟಾಕ್ಷಿಸೊ.

Verse 4

ನೀ ಮಾತ್ರ ಶಾಂತಿಯ ಬುಗ್ಗೆಯು
ನಿನ್ನಲ್ಲಿ ಕಷ್ಟಕೆ ಅಂಜೆÉವು
ನಿನ್ನ ಮರೆಯಲ್ಲಿ
ಭಯನಿವಾರ
ಐ ಅಂತ್ಯವಿಘ್ನದಿ ಮಾಡುದ್ಧಾರ
ಕಟಾಕ್ಷಿಸೋ.

Go to top