Verse 1

ಪಂಚಾಶತ್ತಮದಿನದಿ
ಸದ್ಭಕ್ತ ಶಿಷ್ಯಮಂಡಲಿ
ವಾಗ್ದತ್ತ ಆತ್ಮಸ್ನಾನ
ಯಾವಾಗ ಪ್ರಾಪ್ತವಗುತೆ
ಎಂದೆದುರ್ನೋಡಿದಂತೆಯೆ
ನಾಂ ಕೋರುತ್ತೇವಾ ದಾನ.

Verse 2

ಬೀಸೋದು ಬಿರುಗಾಳಿಯು
ಎಂಬಂತೆ ನೀನಾ ದಿನವು
ದೇವಾತ್ಮನೇ ಐತಂದು
ಒಬ್ಬೊಬ್ಬನೊಳ್ ಪ್ರವೇಶಿಸಿ
ಸಂಜೀವವಿತ್ತ ವಿಧದಿ
ಬೀಸಿಂದೂ ಜೀವ ತಂದು.

Verse 3

ಆ ಮನೆ ತುಂಬಾ ವ್ಯಾಪಿಸಿ
ನೀನುರಿಯಂತೆ ಕಾಣಿಸಿ
ಕೂತಿ ಪ್ರತ್ಯೊಬ್ಬನಲ್ಲಿ.
ನಮ್ಮಲ್ಲೂ ಬೆಂಕಿಯಾಗಿ ಬಾ
ಕಲ್ಮಷ ಸುಟ್ಟು ಪ್ರೀತಿಯ
ನೀನುರಿಸಾತ್ಮದಲ್ಲಿ.

Verse 4

ನವೀನ ಭಾಷೆ ಉಸುರಿ
ದೇವ ಪ್ರಭಾವ ಕೀರ್ತಿಸಿ
ಮಾತಾಡೋ ಶಕ್ತಿಯನ್ನು
ನೀನಂದು ಕೊಟ್ಟಿ ನಮಗೂ
ಕೊಟ್ಟಿಂದು ವರ ವರ್ಧಿಸು
ಶ್ರೀ ಯೆಸುರಾಜ್ಯವನ್ನು.

Go to top