Verse 1

ಕರ್ತಗೆ ಸ್ತೋತ್ರವ
ಮಾಡೊಣ ಬನ್ನಿರಿ
ಉತ್ಸಾಹಗೀತವ
ಇಂಪಾಗಿ ಹಾಡಿರಿ.
ಸುನೀತಿಯುಳ್ಳ ಜಗನ್ನಾಥ
ಅದ್ಭುತವುಳ್ಳ ದೇವರಾತ.
ಸಂತೋಷ ಪೂರ್ಣ ಹೃದಯ
ಉಚ್ಚರಿಸಲೀ ಗೀತವ.

Verse 2

ಕೃಪಾಳು ಒಡೆಯ
ಅಯೋಗ್ಯ ನಮಗೆ
ದಿನಾಲು ಮಾಡಿದ
ಅಮಿತ ದಯಕೆ
ನಾವಿಂದು ಸ್ತೋತ್ರ ಮಾಡುತ್ತೇವೆ.
ಕೃತಜ್ಞರಾಗಿ ಹಾಡುತ್ತೇವೆ.
ಸಮಸ್ತರೀಗ ಹಾಡುತಾ
ಸಂಕೀರ್ತಿಸಿ ಹಲ್ಲೆಲೂಯ.

Verse 3

ನಮ್ಮಲ್ಲಿ ಆಳ್ವನು
ಸಂಪ್ರೀತಿಯರಸ
ತಾನಾಗಿ ಇರ್ವನು
ಅತ್ಯುತ್ತಮಾಶ್ರಯ.
ಸಮಸ್ತ ನಮ್ಮ ಕ್ರೈಸ್ತಗೋತ್ರ
ಸುರಾಗವೆತ್ತಿ ಶ್ರೇಷ್ಠ ಸೋತ್ರ
ಕ್ರಿಸ್ತ್ಯೇಸುವಿಗೆ ಹಾಡುವಾ
ನಮೋನಮಃ ಹೊಸೀಯನ್ನಾ.

Verse 4

ಇನ್ನೂ ನಮ್ಮೊಡನೆ
ದುರ್ವೈರಿ ಹೋರಲು
ಮೆಸ್ಸಿಯನೆಮಗೆ
ಸೈನ್ಯಾದಿಪತಿಯು.
ಉಂಟಾತನಲ್ಲಿ ದುರ್ಗಸ್ಥಾನ
ತಾನಾರಿಸುತ್ತಾನಗ್ನಿಬಾಣ.
ಹಾಡೋಣ ಸೈನ್ಯಪತಿಗೆ
ವಿಜಯ ಜಯ ನಿನಗೆ.

Verse 5

ಹೀಗಿರಬೇಕಲ್ಲೋ
ನಮ್ಮಲ್ಲಿ ಹರುಷ?
ನಮ್ಮೊಳಗುಂಟಿಗೋ
ಸರ್ವಾರ್ಥಸಿದ್ಧಕ.
ದೇಹಾತ್ಮ ಪ್ರಾಣಕ್ಕಿಹ ಸುಖ
ಆ ಲೋಕದಲ್ಲಿ ಯಾವ ದುಃಖ?
ಹಾಡೀಗಲೇ ಹಲ್ಲೆಲೂಯ
ವಿಜಯವು ಹೊಸೀಯನ್ನಾ.

Go to top