Verse 1

ಆರಾಧ್ಯ ಯೇಸು ನಾಮವೇ
ಶ್ರೀ ದೇವದೂತರು
ಸಾಷ್ಟಾಂಗ ಬೀಳ್ವರಾತಗೆ
ಸಮ್ರಾಜ ರಾಜ ರಾಜ
ರಾಜನಾತನು.

Verse 2

ವಿಮುಕ್ತರಾದ ಶುದ್ಧರೇ
ಕ್ರಿಸ್ತ್ಯೇಸು ರಕ್ತವು
ನಿಮ್ಮಲಂಕಾರವಸ್ತ್ರವೇ
ಸಮ್ರಾಜ ರಾಜ ರಾಜ
ರಾಜನಾತನು.

Verse 3

ಆಲೈಸಿರಿಸ್ರಾಯೇಲ್ಯರೇ
ಈ ಪ್ರೀಯ ನಾಮವು
ನಿಮ್ಮೆಲ್ಲರಿಂಗೆ ಜೀವವೇ
ಸಮ್ರಾಜ ರಾಜ ರಾಜ
ರಾಜನಾತನು.

Verse 4

ಅಜ್ಞಾನಮಗ್ನ ಜನರೇ
ಈ ಶ್ರಮೆ ಗಾಯವು
ವಿಶ್ರಾಂತಿಕರ ನಿಮಗೆ
ಸಮ್ರಾಜ ರಾಜ ರಾಜ
ರಾಜನಾತನು.

Verse 5

ಈ ಶುಭರಾಯ ಧನಿಗೆ
ಭೂಜಾತಿ ಕೊಡೋದು
ಕಿರೀಟ ದಾನ ಮಹಿಮೆ
ಸಮ್ರಾಜ ರಾಜ ರಾಜ
ರಾಜನಾತನು.

Verse 6

ಆ ಘನ ಕೂಟದೊಡನೆ
ಸಂಸ್ತುತಿ ಹಾಡಲು
ನಾವಡ್ಡ ಬೀಳ್ವ ಈತಗೆ
ಸಮ್ರಾಜ ರಾಜ ರಾಜ
ರಾಜನಾತನು.

Go to top