Verse 1

ರಾಜಾಧಿರಾಜ ಪುತ್ರಗೆ
ಕೊಡೀಶ ನ್ಯಾಯತೀರ್ವಿಕೆ
ಏರ್ಪಡಿಸೋನು ನ್ಯಾಯವ
ಭೂಮಿಲಿ ಸಮಾಧಾನವ.

Verse 2

ಕ್ರಿಸ್ತ್ಯೇಸು ರಾಜನಾಳುವ
ಚಂದ್ರಾರ್ಕರಿರ್ವ ತನಕ
ಸಮುದ್ರದಿಂ ಸಮುದ್ರಕು
ಈ ರಾಜ್ಯಕಂತ್ಯವಿರದು.

Verse 3

ಸುಮಂಗಳಾಶೀರ್ವಾದವು
ಈ ಧನಿಗಾಗಿ ಏಳ್ವದು
ಈ ನಮ್ಮ ತುಟಿ ಸಹಿತ
ಹಾಡೋದು ಘನಸ್ತೋತ್ರವ.

Verse 4

ಭೂಲೋಕಕುಲದವರು
ಆತನ್ನ ಸೇವಿಸುವರು
ಭೂರಾಜಸಂಘವೆಲ್ಲವು
ಹೇಮಾದಿ ದಾನ ತರೋದು.

Verse 5

ಆಕಾಶ ಮಳೆ ಸುರಿಸಿ
ಈ ಭೂಮಿ ತೋಯ್ಸುವಂದದಿ
ದೇವಾತ್ಮ ವೃಷ್ಟಿಗರೆದು
ಹೃತ್‍ಕ್ಷೇತ್ರ ಹದಮಾಡಿತು.

Verse 6

ಈ ವರೆಗೆಷ್ಟೋ ಕಡಿಮೆ
ಉಂಟಾಯ್ತು ಪುಷ್ಟಿ ಪೈರಿಗೆ
ಹೆಚ್ಚಾಗಲಿನ್ನು ಬೆಳೆಯು
ಎಲ್ಲೆಲ್ಲೂ ಸಭಾಸಂಖ್ಯೆಯು.

Verse 7

ಗುಲಾಮಬಂಧ ಛೇದಿಸಿ
ದರಿದ್ರರಿಂಗೆ ಸಂತೃಪ್ತಿ
ಕಂಗಾಲರಿಂಗೆ ಮೋಕ್ಷವ
ಕಟಾಕ್ಷದಿಂದ ಕೊಡುವ.

Verse 8

ಭೂಸ್ವರ್ಗಲೋಕದೊಳಗೆ
ಕ್ರಿಸ್ತ್ಯೇಸು ಘನನಾಮಕೆ
ಕೊಂಡಾಟ ಸ್ತೋತ್ರ ಮಾನವು
ಇಂಪಾಗಿ ಏಳಲೆಂದಿಗು.

Go to top