Verse 1

ಕ್ರಿಸ್ತ ರಾಜ್ಯವಾಳಿ ಶಾನೆ
ಘನದಿಂದ ಬಾಳುತಾನೆ
ಆತ ಜಯಶಾಲಿಯು.
ಹರ್ಷವಾಗಿರಾತನಲ್ಲಿ
ಆತಗಿಹಪರದಲ್ಲಿ
ಎಲ್ಲ ವಶವಹುದು.

Verse 2

ಗದ್ದಿಗೆಯ ಸುತ್ತಲಾಗಿ
ದೂತರೆಲ್ಲ ದಾಸರಾಗಿ
ನಿಂತು ವಂದಿಸುವರು.
ನನ್ನ ಬಲ ಪಾರ್ಶ್ವದಲ್ಲಿ
ಕೂಡ್ರುಎಂತ ಮಗನಲ್ಲಿ
ಮೆಚ್ಚಿ ತಂದೆ ಎಂದನು.

Verse 3

ತಂದೆ ಏಕ ದೇವರೆಂದು
ಮಗ ಪಿತೃರೂಪನೆಂದು
ಭಕ್ತರೆರಗುವರು.
ಯೇಸುವಲ್ಲಿ ನಿತ್ಯ ಪ್ರಾಣ
ಯೇಸುವಲ್ಲಿ ಸರ್ವ ತ್ರಾಣ
ಯೇಸು ವಿಶ್ವರಾಜನು.

Verse 4

ಆತ ಪ್ರಯಶ್ಚಿತ್ತವಾಗಿ
ಪಾಪ ಪರಿಹಾರಕಾಗಿ
ಕ್ರೂಜೆಯಲ್ಲಿ ಸತ್ತನು.
ಆತನಂತ್ಯ ದಿನದಲ್ಲಿ
ಘನವಾಗಿ ಬರುವಲ್ಲಿ
ನಮ್ಮ ನಿತ್ಯಜೀವವು.

Verse 5

ಆತ ತನ್ನ ವಾಕ್ಯವನ್ನು
ನಂಬಿಕೊಂಡ ಭಕ್ತರನ್ನು
ಮೋಕ್ಷಸ್ಥಾನಕೊಯ್ವನು.
ಕ್ಷುಧೆ ದಾಹ ದುಃಖ ಕಷ್ಟ
ಚಿಂತೆ ಭೀತಿ ರೋಗ ನಷ್ಟ
ಇನ್ನು ಮುಂದೆ ಕಾಣವು.

Go to top