Verse 1

ಸತ್ಹೋದ ಕ್ರಿಸ್ತನು
ಈ ಶುಭ ದಿನದಿ
ಉತ್ಥಾನವಾದನು
ಸಾವನ್ನು ಜಯಿಸಿ.
ಓ ಕೊಯ್ಯಲ್ಪಟ್ಟ ಕುರಿಮರಿ.
ವಿಜೈಸಿ ಬಿಟ್ಟ ಹಳೇ ಅರಿ.
ವಿಜಯಶಾಲಿ ಆಗಿದ್ದೀ
ಆ ದುಷ್ಟ ವೈರಿ ಕೊಂದಿದ್ದೀ.

Verse 2

ಮಹಾಂತ ಜಯಕೆ
ಸ್ವಪ್ರಜೆ ಹಾಡಲಿ
ಸಮಸ್ತ ಜನರೆ
ಸನ್ಮಾನ ಕೊಡಿರಿ.
ಸಮಾಧಿಯಿಂದ ಎದ್ದಿದ್ದಾನೆ.
ಸುದಿವ್ಯ ಬಲ ಹೊಂದಿದ್ದಾನೆ.
ಆತಂಗೆ ಉಂಟು ನಿತ್ಯಕು
ಪ್ರಭಾವ ಸ್ತೋತ್ರ ಮಾನವು.

Verse 3

ಸ್ವಸ್ತ್ಯಸ್ತು ಅರಸಾ
ವಿಜಯಶಾಲಿಯೇ
ನೀ ಬಾಳು ಒಡೆಯಾ
ತ್ರಿಲೋಕನಾಥನೇ.
ಸಾಷ್ಟಾಂಗ ಅಡ್ಡ ಬೀಳುತ್ತೇವೆ.
ಅತ್ಯಂತ ಘನ ಕೊಡುತ್ತೇವೆ.
ಸತ್ತೆದ್ದ ಕುರಿಮರಿಗೆ
ನರಾರಿ ಗೆದ್ದ ರಾಜಗೆ.

Verse 4

ನಮ್ಮಲ್ಲಿ ಮೃತಿಯ
ಕ್ರಿಸ್ತ್ಯೇಸು ಜಯಿಸು
ಉತ್ಥಾನ ಜೀವವ
ನಮ್ಮಲ್ಲಿ ವರ್ಧಿಸು.
ಈ ನಮ್ಮ ಮರ್ತ್ಯ ಕಾಯದಲ್ಲಿ.
ಸಂಜೀವವನ್ನು ನೀಡ ಬಲ್ಲಿ.
ಹೊಸ್ತಾಗಿ ಚುರುಕಾಗಲಿ
ನಿನ್ನುಸುರಿಂದ ಬಾಳಲಿ.

Verse 5

ಸಮಾಧಿ ಸೇರ್ವರೆ
ನಾನಿನ್ನು ಹೆದರೆ
ನಿನ್ನುರಿ ಬಾಣಕೆ
ಸಾವೇ ನಾನದರೆ.
ಹೋ ಮೃತ್ಯು ನಿನ್ನ ಕೊಂಡಿ ಎಲ್ಲಿ?
ಪಾತಾಳ ನಿನ್ನ ಜಯವೆಲ್ಲಿ?
ಕ್ರಿಸ್ತ್ಯೇಸುವಿನ ಮೃತ್ಯುವು
ಆಯ್ತೆಮ್ಮ ಜೀವಮೂಲವು.

Go to top