Verse 1

ಮೃತ್ಯುಬಂಧದಿಂದ
ಗೋರಿಯೊಳಗಿಂದ
ಯೇಸು ಎದ್ದನು.
ಜೈಸಿ ಮೃತಿಯನ್ನು
ರಾಜಪೀಠವನ್ನು
ಏರಿ ಕೂತನು.
ಈಗಲೇ ವಿಶ್ವಾಸಿಗೆ
ನಿತ್ಯಜೀವ ಪ್ರಾಪ್ತಿಯಾಯ್ತು
ಭಯ ಭಂಗವಾಯ್ತು.

Verse 2

ಶತ್ರುವನ್ನು ಗೆದ್ದಿ
ಸತ್ತು ಹೋಗಿ ಎದ್ದಿ
ಜೀವರಾಜನೆ.
ಪಾಪ ಕಳೆಯೋಣ
ಸತ್ತು ಬದುಕೋಣ
ಜೀವನೀತಿಗೆ.
ಯೇಸುವೇ ನೀನೊಬ್ಬನೇ
ನಮ್ಮ ಗತಿ ಪಾದಸೇವೆ
ನಿನಗೀಯುತ್ತೇವೆ.

Verse 3

ಕರ್ತಗುಂಟು ಪೀಠ
ಮಹಿಮೇ ಕಿರೀಟ
ಇನ್ನು ನಮ್ಮದೇ.
ಮೃತ್ಯುಕ್ರೂರಶಸ್ತ್ರ
ದೇಹವೆಂಬ ವಸ್ತ್ರ
ತಿವಿಯುತ್ತಲೇ.
ಆತನೇ ಸ್ವಪ್ರಜೆಗೆ
ಸೂರ್ಯವಸ್ತ್ರ ಕೊಡೋನಲ್ಲಿ
ದಿವಸುಖದಲ್ಲಿ.

Go to top