Verse 1

ಜೀವರಾಜ ಮೃತ್ಯುತ್ರಾಣ
ಮುರಿದ್ಹಾಕಿದ
ಗೋರಿಯೊಳಗಿಂದುತ್ಧಾನ
ವಾಗಿ ಜೈಸಿದ
ವಾಗಿ ಜೈಸಿದ.

Verse 2

ಜೀವಪ್ರಭುವೇ ಪಾತಾಳ
ಜೈಸಿ ಬಿಟ್ಟನು.
ರಾಜನಾಗಿ ನಿತ್ಯ ಬಾಳ
ಆತನೆದ್ದನು
ಆತನೆದ್ದನು.

Verse 3

ಮೂಲಪಿತನಿಂದ ಬಂದ
ಪಾಪಕೃತ್ಯದ
ಶಾಪವೆಲ್ಲ ದೇವಕಂದ
ಪೂರ್ಣ ತೆಗೆದ
ಪೂರ್ಣ ತೆಗೆದ.

Verse 4

ಮೃತ್ಯುವಿನ ಭಯವೆಲ್ಲಿ
ಕ್ರಿಸ್ತ ಪ್ರಜೆಗೆ?
ಯೇಸುವಿನ ಜೀವದಲ್ಲಿ
ಉಂಟು ರಕ್ಷಣೆ
ಉಂಟು ರಕ್ಷಣೆ.

Verse 5

ಕರ್ತ ಯೇಸು ನೀ ನನ್ನಲ್ಲಿ
ಇನ್ನು ಬದುಕು
ವಾಸಸ್ಥಾನ ಪರದಲ್ಲಿ
ನಂಗೆ ಪಾಲಿಸು
ನಂಗೆ ಪಾಲಿಸು.

Verse 6

ಯೇಸು ಕ್ರಿಸ್ತ ಕಷ್ಟದಾಳು
ಜಯ ಶಾಲಿಯೆ
ನಿನ್ನ ಸಾವು ನನ್ನ ಬಾಳು
ನಿಂಗೆ ವಂದನೆ
ನಿಂಗೆ ವಂದನೆ.

Go to top