Verse 1

ನಾನು ನಂಬಿಕೊಳ್ಳು
ನನ್ನ ಕರ್ತ ಬಾಳುತಾನೆ.
ಮೃತ್ಯುರಾಜಭಯವ
ಪರಿಹಾರ ಮಾಡಿದ್ದಾನೆ.
ಗಾಢ ಕತ್ತಲೊಳಗೆ
ನನ್ನ ಬೆಳಕಾತನೆ.
jbvztn#Jrm%195

Verse 2

ನಿತ್ಯ ಜೀವದರಸ
ತನ್ನ ಮಾತು ಕೈಕೊಳ್ಳೊನು.
ಆತ ತನ್ನ ಭಕ್ತನ
ತಾನಿರ್ವಲ್ಲಿ ಸೇರಿಸೋನು.
ಅಂಗವನ್ನು ತಲೆಯು
ಎಂದೂ ಬಿಟ್ಟು ಹೋಗದು.

Verse 3

ಆತನೈಕ್ಯದೊಳಗೆ
ಭಕ್ತಿಯಿಂದ ಸೇರುತ್ತೇನೆ.
ಆತನಲ್ಲಿ ನಂಬಿಕೆ
ಎಂಬ ಕೈಯನ್ನಿಟ್ಟಿದೇನೆ.
ಕ್ರೂರ ಮೃತಿ ನಮ್ಮನ್ನು
ಭೇದ ಮಾಡ ಕೂಡದು.

Verse 4

ಮಾಂಸವಾಗಿ ಹುಟ್ಟಿದೆ
ಬೇಗ ಬೀಳ್ವೆ ಬೂದಿಯಾಗಿ.
ಅಂತ್ಯ ದಿನ ಬರಲೆ
ಆತ ನಿತ್ಯಜೀವಕಾಗಿ.
ಮಣ್ಣಿನಿಂದ ಕರೆದು
ಎಬ್ಬಿಸೋನು ನನ್ನನ್ನು.

Verse 5

ಇಲ್ಲಿ ರೋಗ ದುಃಖವು
ಅಲ್ಲಿ ಕ್ಷೇಮ ಸುಖತ್ರಾಣ.
ಇಲ್ಲಿ ಮಣ್ಣು ಬೂದಿಯು
ಅಲ್ಲಿ ನಿತ್ಯ ಘನ ಮಾನ.
ಇಲ್ಲಿ ಧೂಳಿಯಾದರೂ
ಆತ್ಮವಾಗಿ ಏಳ್ವೆನು.

Verse 6

ದೇಹ ಪಡು ಹರ್ಷವ
ಯೇಸು ಕ್ರಿಸ್ತನಂಗವಾದಿ.
ನಂಬು ಬಿಡು ಚಿಂತೆಯ
ಜೀವಕಾತ ನಿನ್ನ ಹಾದಿ.
ಅಂತ್ಯತೂರ್ಯಧ್ವನಿಯು
ಎಬ್ಬಿಸೋದು ನಿನ್ನನ್ನು.

Go to top