Verse 1

ಈ ದಿನದಲ್ಲಿ ಯೇಸುವು
ಸಮಾಧಿಯಿಂದ ಎದ್ದನು
ಸಜೀವ ರಾಜನಾಗಿ.
ವಿಜಯಗೀತ ಹಾಡಿರಿ
ಅನಂತ ಸ್ತೋತ್ರ ಮಾಡಿರಿ
ವಿಧೇಯ ದಾಸರಾಗಿ.
ತನ್ನ ಘನ
ಹಿಂದೆ ಬಿಟ್ಟು
ಪ್ರೀತಿ ಇಟ್ಟು
ನರರಲ್ಲಿ
ಕ್ರಿಸ್ತ ಸತ್ತ ಕ್ರೂಜೆಯಲ್ಲಿ.

Verse 2

ನಮ್ಮತಿ ಪ್ರೀಯ ಕರ್ತನೆ
ನೀನೆಮ್ಮ ನಿತ್ಯ ಕೋರಿಕೆ
ನಿನ್ನಲ್ಲಿ ನಂಬಿದ್ದೇವೆ.
ನಿನ್ಹೊರ್ತು ಬೆಳಕಿಲ್ಲವು
ನಿನ್ಹೊರ್ತು ಸುಖ ಕಾಣದು
ನಿನ್ಹೊರ್ತು ಸಾಯುತೇವೆ.
ಆಳು ಬಾಳು
ಜೈಸಿ ನಿನ್ನ
ಶತ್ರುವಿನ
ರಾಜ್ಯವನ್ನು
ಕಾಯಿ ನಿನ್ನ ಪ್ರಜೆಯನ್ನು.

Verse 3

ಮರ್ತ್ಯದೇಹದಿಂದಲೂ
ಸಮಾಧಿಯೊಳಗಿಂದಲೂ
ವಿಧೇಯ ಭಕ್ತರನ್ನು.
ನೀ ತಪ್ಪಿಸ್ಯೇಸು ಕ್ರಿಸ್ತನೆ
ಆನಂತ ಘನದೊಳಗೆ
ಕೊಡೈ ಪ್ರವೇಶವನ್ನು.
ಏರಿ ಸೇರಿ
ನೀನಿರ್ವಲ್ಲಿ
ಕಾಂತಿಯಲ್ಲಿ
ನಿನ್ನ ಮುಖ
ದೃಷ್ಟಿಸೋದು ಎಂಥ ಸುಖ.

Go to top