Verse 1

ಕ್ರಿಸ್ತ್ಯೇಸು ಕ್ರೂಜೆಯಲ್ಲಿ
ಸತ್ತೆಮ್ಮ ಪಾಪಕಾಗಿ
ತೃತೀಯ ದಿನದಲ್ಲಿ
ತಾನೆದ್ದ ಜೀವಿಯಾಗಿ.
ಇದರಲ್ಲಿ ಹರ್ಷಿಸಿ
ಕರ್ತಂಗೆ ಸ್ತೋತ್ರ ಮಾಡಿರಿ
ಕೊಂಡಾಡಿ ಹಲ್ಲೆಲೂಯ
ಹಲ್ಲೆಲೂಯ.

Verse 2

ಸಾವನ್ನು ಜೈಸೋ ಬಲ
ಭೂಜನಕಿರಲಿಲ್ಲ.
ನಮ್ಮಲ್ಲಿ ಪಾಪಮಲ
ಎಲ್ಲೆಲ್ಲು ನೀತಿಯಿಲ್ಲ.
ಅದರಿಂದ ಮೃತ್ಯುವು
ನಮ್ಮಲ್ಲಿ ಕೈಯ ಹಾಕಿತು.
ಸಹಾಯಗಾರನಾರು?
ಹಲ್ಲೆಲೂಯ.

Verse 3

ಸ್ವಪಿತೃಗೃಹದಿಂದ
ಹೊಂಟವತಾರವಾಗಿ
ಅನಂತ ಪ್ರೇಮದಿಂದ
ಸತ್ತೆಮ್ಮ ಹೊಣೆಯಾಗಿ
ಮರಣಾಧಿಕಾರವ
ಕ್ರಿಸ್ತ್ಯೇಸುನಾಥ ಜೈಸಿದ.
ಇನ್ನೇನೂ ಭಯವಿಲ್ಲ
ಹಲ್ಲೆಲೂಯ.

Verse 4

ಜೀವಕ್ಕೆ ಸಾವಿಗಲ್ಲಿ
ಅಘೋರ ಯುದ್ಧವಾಯ್ತು
ಆ ಜೀವ ಜೈಸುವಲ್ಲಿ
ಸಾವಂತು ನುಂಗಲಾಯ್ತು.
ಸಾವ ತಾಳ್ದ ಜೀವವು
ಸಾವನ್ನು ಜೈಸಿ ಬಿಟ್ಟಿತು.
ನೀ ಸೋತಿ ದುಷ್ಟ ಮೃತ್ಯು
ಹಲ್ಲೆಲೂಯ.

Verse 5

ಸ್ವರ್ಗೀಯ ಪಸ್ಕಬಲಿ
ನೀನೆಮಗನ್ನಪಾನ
ಆ ಕ್ರೂಜೆವೃಕ್ಷದಲಿ
ಆಯ್ತೆಮಗೆಂಥ
ದಾನ ನಮ್ಮ ಮನೆಕದಕೆ
ಆ ರಕ್ತ ಹೆಚ್ಚಿದ್ದಾದರೆ
ಸಂಹಾರಿ ಮುಟ್ಟಲಾರ
ಹಲ್ಲೆಲೂಯ.

Go to top