Verse 1

ಸ್ತುತಿ ಗೊಲ್ಗಥದ್ರಿಯಲ್ಲಿ
ಸತ್ತ ಮೃತ್ಯುಂಜಯಗೆ.
ಸ್ತುತಿ ಪಾಪಿಕುಲದಲ್ಲಿ
ಕೃಪೆ ತೋರ್ದು ಯೇಸುವೆ.
ಬಾಳು ನಮ್ಮ ರಾಜನೆ.
ಸತ್ತು ಪುನರ್ಜೀವಿಯಾದ
ಜೀವಧಿಪತಿಗೆ
ಹಾಡಿರೆಲ್ಲ ಭಕ್ತರೆ.

Verse 2

ಸ್ತೋತ್ರದಲ್ಲಿ ಒಡನಾಡಿ
ಮನಪೂರ್ಣ ಹರ್ಷದಿ.
ಮೃತ್ಯುಂಜಯಗೀತೆ ಮಾಡಿ
ಅಡ್ಡ ಬಿದ್ದು ಹಾಡಿರಿ.
ವಾದ್ಯವೆಲ್ಲ ನುಡಿಸಿ
ಗಟ್ಟಿ ಧ್ವನಿಯಿಂದ ಹಾಡಿ
ಘನವುಳ್ಳ ಕರ್ತಗೆ
ಎರ್ಗಿರೆಲ್ಲ ಭಕ್ತರೆ.

Verse 3

ನಾ ಸಮಾಧಿ ಬಿಡಲಾಗ
ನನ್ನ ಪ್ರಿಯ ಯೇಸುವೆ.
ನಿನ್ನ ಮುಖ ನೋಡುವಾಗ
ದೇಹ ತೇಜವಾಗಲೆ.
ಮಧ್ಯವರ್ತಿ ಕರ್ತನೆ
ಹೌದು ನಾನು ಎಚ್ಚರ್ತಾಗ
ನಿನ್ನ ಜೀವದೈಕ್ಯಕೆ
ಪೂರ್ಣವಾಗಿ ಸೇರುವೆ.

Go to top