Verse 1

ಗಟ್ಟ್ಯಾದ ಬಂಡೆಯಲ್ಲಿ
ಸಮಾಧಿಯೊಡೆದು.
ಅಮೂಲ್ಯ ಬೀಜವನ್ನು
ಯೊಸೇಫನಿಟ್ಟನು.

Verse 2

ಆ ತೋಟ ಪೃಥ್ವಿಯಲ್ಲಿ
ವಿಶೇಷವಾದುದು.
ಸಮಸ್ತ ಬೀಜದೊಳ್ಗೆ
ಆ ಬೀಜ ಶ್ರೇಷ್ಠವು.

Verse 3

ತೃತೀಯ ದಿನದಲ್ಲಿ
ಹೊತ್ತೇರುವಾಗಲು.
ಆ ಬೀಜ ಮೊಳಿತೆದ್ದು
ಭೂಗರ್ಭ ಬಿಟ್ಟಿತು.

Verse 4

ಆ ದಿನದಲ್ಲಿ ಜೀವ
ಸಾವಿಂದ ಹುಟ್ಟಿತು.
ಆ ದಿನದಲ್ಲಿ ಸಾವು
ಸತ್ಥೀನವಾಯಿತು.

Verse 5

ಸಮಾಧಿಯಲ್ಲಿ ಸೇರಿ
ಶ್ರೀ ಯೇಸು ಕ್ರಿಸ್ತನೇ.
ನೀ ಜೀವಮಾರ್ಗವನ್ನು
ಪ್ರಸಿದ್ಧ ಮಾಡಿದೆ.

Verse 6

ನಿನ್ನಲ್ಲಿ ದೃಢವಾಗಿ
ವಿಶ್ವಾಸವಿಟ್ಟರೆ.
ಸಮಾಧಿಯಲ್ಲಿ ಸೇರ
ನಾನೇತಕಂಜುವೆ?

Verse 7

ಸಮಾಧಿ ದೇಹಕಿನ್ನು
ವಿಶ್ರಾಂತಿಸ್ಥಳವು.
ನನ್ನಾತ್ಮ ಆಚೆ ದಾಟಿ
ನಿನ್ನೊಡನಿರ್ವದು.

Verse 8

ಪಾತಾಳ ಶಕ್ತಿಯನ್ನು
ನೀ ಕರ್ತ ಜೈಸಿದೆ.
ನಿನ್ನಲ್ಲಿ ನಾನು ನಂಬಿ
ವಿಜಯ ಹೊಂದುವೆ.

Go to top