Verse 1

ಕ್ರಿಸ್ತ್ಯೇಸು ಜೀವರಾಜನೇ
ನೀನೆದ್ದಿ ತೇಜದಿಂದಲೇ
ಸಮಾಧಿಯೊಳಗಿಂದ.
ನಿನ್ನನ್ನು ಶಿಷ್ಯಸಂಘವು
ಕಂಡಾಗ ಜೀವ ಹೊಂದಿತು
ಮಹಾಂತ ಹರ್ಷದಿಂದ.
ಶ್ರೀ ಯೇಸು ನಿನ್ನ ಜೀವವೆ
ಜೀವೋದಯ ಜಗತ್ತಿಗೇ.

Verse 2

ಅಮೂಲ್ಯವಾದ ಬೀಜವ
ಯೊಸೇಫನಿಟ್ಟು ಮುಚ್ಚಿದ
ಆ ಕಲ್ಲು ಗೋರಿಯಲ್ಲಿ.
ಅಮೂಲ್ಯವಾದ ಪುಷ್ಪವು
ಆ ಬೀಜದಿಂದ ಹುಟ್ಟಿತು
ಏಕಾಂತ ತೋಟದಲ್ಲಿ.
ಶ್ರೀ ಯೇಸು ನಿನ್ನ ಜೀವವೆ
ಜೀವೋದಯ ಜಗತ್ತಿಗೆ.

Verse 3

ಕಡೇಲಿ ಸರ್ವ ಲೋಕಕು
ವಸಂತಕಾಲ ಬಪ್ಪುದು
ದಿವ್ಯಾತ್ಮ ತ್ರಾಣದಿಂದ.
ಅಸಂಖ್ಯ ಜನಗಣವು.
ಆವಾಗಲೆಚ್ಚರ್ತೇಳ್ವದು
ಭೂಗರ್ಭಕೋಣೆಯಿಂದ.
ಶ್ರೀ ಯೇಸು ನಿನ್ನ ಜೀವವೆ
ಜೀವೊದಯ ಜಗತ್ತಿಗೆ.

Verse 4

ತುತೂರಿ ಊದುವಾಗಲು
ಮಹತ್ವದಲ್ಲಿ ಯೇಸುವು
ಈ ಭೂಮಿಗಿಳಿಯೋನು.
ಧೂಳಿಂದ ನಮ್ಮನೇರಿಸಿ
ತಾನಿರ್ವ ಘನಸ್ಥಳದಿ
ನಮ್ಮನ್ನು ಸೇರಿಸೋನು.
ಶ್ರೀಯೇಸು ನಿನ್ನ ಜೀವವೆ
ಜೀಮೋದಯ ಜಗತ್ತಿಗೆ.

Go to top