Verse 1

ವಿಜಯವೇ ಸಂತೋಷವುಳ್ಳ ದಿನ
ಸಜೀವಿಯಾಗಿ ಯೇಸು ಎದ್ದನು.
ಹೋಯ್ತೀಗ ಸಾವು ನಮ್ಮ ಯೇಸುವಿನ
ಸಮಾಧಿಯಲ್ಲಿ ಜೀವ ಹುಟ್ಟಿತು.
ಪಾತಾಳವೇ ಇನ್ನೆಲ್ಲಿ ನಿನ್ನ ಜಯ?
ನರಾರಿ ಎಲ್ಲಿ ನಿನ್ನ ಕೊಂಡಿಯು?
ಕ್ರಿಸ್ತ್ಯೇಸುವಾದನೆಮ್ಮ ಜೀವೋ ದಯ
ಶತ್ರುಂಗಳನ್ನು ಜೈಸಿ ಗೆದ್ದನು.

Verse 2

ಸಮಾಧಿಗಾಗಿ ಇನ್ನು ಭಯವಿಲ್ಲ
ಮಹಾ ಸಂತೋಷಕರ ವಚನ.
ಪಾಪಿಷ್ಠ ಕೇಳು ಸಾವು ಇನ್ನು ಇಲ್ಲ
ಅನಂತ ಜೀವ ಯೇಸು ತಂದಿತ್ತ.
ಹೀಗಾದ್ದರಿಂದ ಬನ್ನಿ ಜೀವವನ್ನು
ಸಂಪಾದಿಸೋಣ ಕ್ರೀಸ್ತನಿಂದಲೇ.
ಈ ಮಹತ್ತಾದ ಜಯವಾರ್ತೆಯನು
ಸಂತೋಷದಿಂದ ಕೇಳಿ ಭ್ರಾತ್ರರೇ.

Verse 3

ಈ ಜಯಮೂಲವಾಗಿ ನಿತ್ಯ ಜೀವ
ನಮೆಲ್ಲರಿಂಗೆ ಸಿದ್ಧವಾಯಿತು.
ಕ್ರಿಸ್ತ್ಯೇಸು ಪಾಪಪರಿಹಾರ ಈಯ್ವ
ಸಂದ್ಹೋಯಿತೆಲ್ಲ ನಮ್ಮ ಸಾಲವು.
ಸಂದೇಹ ಬೇಡ ದೇವರೊಲ್ದಿದ್ದಾನೆ
ವಿರೋಧವಾಗಿ ಯಾರೂ ನಿಲ್ಲರು.
ಮಧ್ಯಸ್ಥ ಯೇಸು ನಮಗಿರುತಾನೆ
ನಾವಾತನಿಂದ ಜೈಸಬಹುದು.

Verse 4

ವಿಜಯವೇ ಪಾಪಿಷ್ಠರಾದ ಜನ
ಈ ಜಯವಾರ್ತೆಯನು ಕೇಳಿರಿ.
ಏ ಬನ್ನಿ ಅಡ್ಡ ಬಿದ್ದು ಕೀರ್ತಿ ಘನ
ಸಂಸ್ತುತಿ ಸ್ತೋತ್ರ ಆತಗ್ಹೇಳಿರಿ.
ಶ್ರೀ ಯೇಸು ನೀನು ಜಯರಾಜನಾಗಿ
ಸದಾ ಸಮಿಪವಾಗಿ ನಿಲ್ಲಲ್ಲು
ನಾವೆಲ್ಲ ಜೈಸಿ ನಿನ್ನ ಜಯಕಾಗಿ
ಭೂಪರಲೋಕದಲ್ಲಿ ಹಾಡ್ವೆವು.

Go to top