Verse 1

ನನ್ನ ಪ್ರೀತಿ ಕ್ರೂಜೆಯಲ್ಲಿ
ಬೇರೆ ಆಶೆ ಇರದು.
ಅತಿಪ್ರಿಯ ಯೇಸುವಲ್ಲಿ
ಹೃತ್ತು ದೃಢವಾಯಿತು.
ನಿತ್ಯ ಒಂದೇ ವಾಕ್ಯವು
ಹೃತ್ಸಂಗೀತವಹುದು.
ಸುಖ ದುಃಖ ಕಾಲದಲ್ಲಿ
ಪ್ರೀತಿ ಕ್ರೂಜೆಯಾತನಲ್ಲಿ.

Verse 2

ಪ್ರೀತಿಯಿಂದ ನಿಂದೆ ನಷ್ಟ
ಹಿಂಸೆ ಬಡತನವು.
ಚಿಂತೆ ಮೊದಲಾದ ಕಷ್ಟ
ಹುಟ್ಟೋದೆಂತ ಬಲ್ಲೆನು.
ಯೇಸು ಆಜ್ಞೆ ಕೊಡಲು
ತೀಕ್ಷ್ಣ ಮೃತಿಗಂಜೆನು.
ಸುಖ ದುಃಖಕಾಲದಲ್ಲಿ
ಪ್ರೀತಿ ಕ್ರೂಜೆಯಾತನಲ್ಲಿ.

Verse 3

ಆತನ್ಹೊರ್ತು ಇಹಸುಖ
ನಂಗೆ ಸುಖವಲ್ಲವು.
ಆತನಿರೆ ಪ್ರೀತಿದುಃಖ
ದುಃಖವೆಂತ ಹೇಳೆನು.
ಈ ಪ್ರಪಂಚದವರು
ಬೈದರೇನು ಚಿಂತೆಯು?
ಸುಖ ದುಃಖ ಕಾಲದಲ್ಲಿ
ಪ್ರೀತಿ ಕ್ರೂಜೆಯಾತಲ್ಲಿ.

Verse 4

ದುಷ್ಟವೈರಿಕೋಪವನ್ನು
ಜೈಸಲೆಂಗೆ ಧೈರ್ಯವು.
ದುಸ್ಸ್ವಭಾವ ಕ್ರಿಯೆಯನ್ನು
ಹೇಸಿ ತಳ್ಳಿಬಿಟ್ಟೆನು.
ಯೇಸುನಾಥ ಪ್ರೀತಿಯು
ಪರಮೇಷ್ಟವಹುದು.
ಇರೆನೊಂದು ಚಿಂತೆಯಲ್ಲಿ
ಪ್ರೀತಿ ಕ್ರೂಜೆಯಾತನಲ್ಲಿ.

Verse 5

ಆತ ತನ್ನ ಪ್ರಿಯರನ್ನು
ತಂದೇಮನೆಗಾಣಿಸಿ.
ಹಾಕಿ ಜಯಮಾಲೆಯನ್ನು
ಫಲವೀಯ್ವನಂತ್ಯದಿ.
ಲೋಕ ಆತನ್ನರಿತು
ಮೆಚ್ಚಲೆಂಥ ಸುಖವು.
ಹಾಡಿರಿಹಪರದಲ್ಲಿ
ಪ್ರೀತಿ ಕ್ರೂಜೆಯಾತನಲ್ಲಿ.

Go to top