Verse 1

ನಾನೊಂದು ತೀರ್ಥ ಬಲ್ಲೆನು
ಆ ತೀರ್ಥದಿಂದಲೆ
ಅಮೂಲ್ಯ ಶುದ್ಧ ರಕ್ತವು
ಹರ್ಯುತಲಿರುತೆ.

Verse 2

ಆಶ್ಚರ್ಯವಾದ ತೀರ್ಥವೇ
ನನ್ನೆಲ್ಲ ಪಾಪವು
ನಿನ್ನಲ್ಲಿ ಮಿಂದ ಕೂಡಲೇ
ಸಂಪೂರ್ಣ ಹೋಯಿತು.

Verse 3

ಕ್ರಿಸ್ತ್ಯೇಸು ನನಗಾಗಿಯೆ
ಈ ರಕ್ತ ಚಿಲ್ಲಿದ
ಈ ಮಾತು ಗಟ್ಟಿ ನಂಬುವೆ
ನಾ ಸಾಯುವನಕ.

Verse 4

ಕ್ರೂಜೆಲಿ ಸ್ವಾಮಿ ಬಲಕೆ
ತೂಗಿದ್ದ ಕಳ್ಳಗು
ಅಪಾರ ದಯದಿಂದಲೆ
ಈ ತೀರ್ಥ ಸಿಕ್ಕಿತು.

Verse 5

ಕ್ರಿಸ್ತ್ಯೇಸು ರಕ್ತದೊಳಗೆ
ತಾ ಮಾಡಿ ಸ್ನಾನವ
ನಿರ್ಮಲನಾಗಿ ಸಾಯುತ್ಲೆ
ಸೇರಿದ ಮೋಕ್ಷವ.

Verse 6

ನಾನೂ ಪಾಪಿಷ್ಠನಾಗಿಯೆ
ಸತ್ಹೋಗುತಿದ್ದೆನು
ಈ ರಕ್ತ ಮಾತ್ರ ನನಗೆ
ಸುಕ್ಷೇಮ ಕೊಟ್ಟಿತು.

Verse 7

ಪವಿತ್ರವಾದ ರಕ್ತವೆ
ನಿನ್ನನ್ನು ನಿತ್ಯಕು
ಜೀವಾತ್ಮ ತ್ರಾಣದೊಡನೆ
ಕೊಂಡಾಡುತಿರ್ವೆನು.

Verse 8

ಈ ಪಾಪಲೋಕದೊಳಗು
ನಿನ್ನನ್ನು ಸ್ತುತಿಪೆ
ಹೇ ಬನ್ನಿ ನಿತ್ಯ ಕ್ಷೇಮವು
ಪುಕ್ಸಾಟೆ ಸಿಕ್ಕುತೆ.

Verse 9

ನಾನಿದ್ದರೂ ನಾ ಸತ್ತರೂ
ಏನೇನೂ ಅಂಜೆನು.
ಕ್ರಿಸ್ತೈಸುವಿನ ರಕ್ತವು
ನನ್ನೊಂದೇ ಗೀತವು.

Go to top