Verse 1

ನನಾಪ್ತ ಯೇಸು ನೀನು ಇಲ್ಲದಿರೆ
ನೀನೆನ್ನ ಜಾಮಿನಾಗಿ ಬೇಡದಿರೆ
ಅರಿಷ್ಟ ಪಾಪಿ ನಂಗೆ ಗತಿ ಇಲ್ಲ
ಆಧಾರವಿಲ್ಲ.

Verse 2

ಈ ದುಃಖವನ್ನು ನಾನು ತಾಳಲಾರೆ
ನಿನ್ನಂಥ ಮಿತ್ರನನ್ನು ಕಾಣಲಾರೆ
ನೀ ಮಾತ್ರ ನೀನು ನನ್ನ ನೀತಿಯಾದಿ
ನಾನಪರಾದಿ.

Verse 3

ನೀನೆನ್ನ ಮೇಲೆ ಯೇಸು ಕೃಪೆ ಮಾಡಿ
ನನ್ನತಿದುಷ್ಟ ಪಾಪವಂ ಬಿಸಾಡಿ
ಶ್ರೀರಕ್ತದಿಂದ ಶುಚಿ ಮಾಡಿಬಿಟ್ಟಿ
ಕಟಾಕ್ಷವಿಟ್ಟಿ.

Verse 4

ಕಟಾಕ್ಷವನ್ನು ನಾನು ನಿತ್ಯ ಹಾಡಿ
ನಿನ್ನತಿಶ್ರೇಷ್ಠ ರಕ್ತ ಸ್ತೋತ್ರ ಮಾಡಿ
ನಿನ್ನಲ್ಲಿ ಮುಕ್ತಿ ಪಡಕೊಂಡಿದ್ದೇನೆ
ಕೊಂಡಾಡುತ್ತೇನೆ.

Go to top