Verse 1

ಹೃತ್ಪ್ರಿಯ ಯೇಸು ನಿನ್ನ ದೋಷವೇನು?
ನೀನಿಂಥ ಶಿಕ್ಷೆಗೊಳಗಾದದೇನು?
ನಿನ್ನಲ್ಲಿ ಪಾಪಕರ್ಮ ಕಂಡರೇನು?
ನಾ ಹೇಳಲೇನು?

Verse 2

ನಿನ್ ಕೆನ್ನೆ ತಟ್ಟಿ ಮುಖಕುಗುಳಿಟ್ಟು
ಮುಳ್ಮುಡಿ ರಕ್ತಮಯಮಂಡೆಗಿಟ್ಟು
ನಿಂಗಿತ್ತರಯ್ಯೋ ಆಮ್ಲಪಿತ್ತ ಪಾನ
ಓ ಯಜಮಾನ.

Verse 3

ನಿನ್ನಲ್ಲಿ ಬೀಳ್ಪುದಯ್ಯ ನನ್ನ ಪಾಪ
ನಿನ್ನನ್ನು ಕಾಡ್ಪುದಯ್ಯ ನನ್ನ ಶಾಪ
ಅನಂತ ಕರ್ಮ ನೋಡಿ ತಾಳಲಾರೆ
ನಿನ್ನಶ್ರುಧಾರೆ.

Verse 4

ಪುಣ್ಯಾತ್ಮ ನೀನು ನಿತ್ಯಬಾಳಲಾಪಿ
ನಾನಯ್ಯ ಸತ್ತು ಕೆಡ ತಕ್ಕ ಪಾಪಿ.
ಹೆಡ್ಡಾಳಿಗಾಗಿ ಸಾಯುತ್ತಾನೆ ರಾಯ
ಇದೆಂಥ ನ್ಯಾಯ?

Verse 5

ನೀ ಪ್ರೀತಿ ನನಗೊಲ್ದ್ ಅನಾಥನಾದಿ
ನೀ ನೀತಿ ನನಗೊಲ್ದು ಪಾಪವಾದಿ
ನನ್ನಲ್ಲಿ ಹೆಚ್ಚಲಿಹಲೋಕ ಕ್ರೀಡೆ
ನಿಂಗಾಯ್ತು ಪೀಡೆ.

Verse 6

ನಾನೇನು ಹೇಳಲೇನು ಮಾಡಲಯ್ಯ?
ನೀ ಗೆದ್ದೇ ಗೆದ್ದಿ ನಾನು ಸೋತೆನಯ್ಯ?
ನನ್ನಾಳ್ಮ ಕ್ಷಮಿಸ್ಯೋಡಿಸೆನ್ನ ಭಯ
ಈಯ್ ನಿನ್ನ ದಯ.

Verse 7

ಅಪಾಯ ನಿಂದೆ ಮೃತ್ಯು ಭಯ ಬಿಟ್ಟು
ನಿನ್ನೊಲ್ಮೆಯಲ್ಲಿ ಮಾತ್ರ ಲಕ್ಷ್ಯವಿಟ್ಟು
ನಾನಿರ್ವೆ ಯೇಸು ಇಹಪರದಲ್ಲಿ
ನೀನಿರುವಲ್ಲಿ.

Go to top