Verse 1

ಕರ್ತಾ ನಿನ್ನ ಶ್ರಮೆಯಂ
ಧ್ಯನಿಸ ಸಹಾಯ.
ನನಗೀಯು ಜ್ಞಾನವಂ
ನೀನೇ ಪಾಲಿಸಯ್ಯ.
ನಿನ್ನ ಕೃಪಾಸ್ಥಾನದಿಂ
ಹುಟ್ಟಿಸೆನ್ನೊಳ್ ಭಕ್ತಿ.
ಕೋರುತ್ತೇನೆ ಧೈರ್ಯದಿಂ
ಕೊಡು ಆತ್ಮಶಕ್ತಿ.

Verse 2

ಘೋರ ಯುದ್ಧರಂಗದಿ
ತಾಳ್ದ ದುಃಖ ಭಯ.
ವೈರಿ ನಿನ್ನ ಬಂಧಿಸಿ
ಇತ್ತ ಪೆಟ್ಟು ಗಾಯ.
ಮುಳ್ಳುಮಾಲೆ ಕ್ರೂಜೆಯ
ವಾಚಾತೀತ ಭಾರ.
ಈ ನಮ್ಮಘಫಲವ
ಯಾರೂ ವರ್ಣಿಸಾರ.

Verse 3

ನನ್ನ ಪ್ರಿಯ ಕರ್ತನೆ
ನಾನು ಗೈದ ಪಾಪ.
ಇನ್ನೂ ತಂತು ನಿನಗೆ
ಶಾನೆ ಮೃತ್ಯ ಶಾಪ.
ನಾನು ಇದನ್ನರಿತು
ಮನಸ್ತಾಪ ಗೈಯ್ಯ
ನನಗನುಗ್ರಹಿಸು
ಜ್ಞಾನ ತ್ರಾಣವಯ್ಯ.

Verse 4

ದೇವಪುತ್ರ ಯೇಸುವೇ
ನಿನ್ನ ಪ್ರೇಮಕ್ಕಾಗಿ.
ದಿವ್ಯ ಚಿತ್ತವಾದರೆ
ನಿನ್ನ ಶಿಷ್ಯನಾಗಿ.
ಕ್ರೂಜೆ ಹೊತ್ತುಕೊಳ್ಳುತ್ತಾ
ನಿನ್ನ ಹಾಗೆ ತಾಳ್ವೆ.
ನಿನ್ನ ವಶವಿರುತ್ತಾ
ನಿತ್ಯವಾಗಿ ಬಾಳ್ವೆ.

Go to top