Verse 1

ನಮ್ಮಾಳ್ಮ ಪಟ್ಟ ಶ್ರಮೆಯನ್ನು
ವಿನಯವಾಗಿ ನೋಡಿ ಧ್ಯಾನಿಸು.
ಸರ್ವೇಶ ತನ್ನ ಜೀವವನ್ನು
ಮನುಷ್ಯಜಾತಿಗಾಗಿ ಕೊಟ್ಟನು.
ಈ ದೊಡ್ಡ ಪ್ರೀತಿಗೀಡು ಆದದು
ಮತ್ತ್ಯಾವನಲ್ಲು ಕಾಣದೆಂದಿಗು.

Verse 2

ಕ್ರಿಸ್ತ್ಯೇಸು ನಿನ್ನ ಕ್ರೂಜೆಯಲ್ಲಿ
ಅನಂತ ಪ್ರೀತಿಯನ್ನು ತೋರಿಸಿ.
ಪವಿತ್ರ ನಿನ್ನ ರಕ್ತ ಚೆಲ್ಲಿ
ವಿಮುಕ್ತಿಕಾರ್ಯ ಮುದ್ರೆ ಹಾಕಿದಿ.
ಭೂಪರಲೋಕ ನಾಶವಾದರೂ
ಈ ಪ್ರೀತಿ ಎಂದು ಬಿದ್ದು ಹೋಗದು.

Verse 3

ನೀ ಕ್ರೂಜೆಯಲ್ಲಿ ತೂಗಲಾಗಿ
ಮಧ್ಯಾಹ್ನದಲ್ಲಿ ಗಾಢ ಕತ್ತಲು.
ಆಘೋರವಾದ ಗುರುತಾಗಿ
ಭಯಸ್ಥ ಭೂಮಿಯನ್ನು ಮುಚ್ಚಿತು.
ನಿನ್ನಲ್ಲಿ ನಂಬಿ ನಾನು ಸತ್ತರೆ
ಅನಂತ ಕಾಂತಿಯನ್ನು ಕಾಣುವೆ.

Verse 4

ಉಂಟೆನಗೀಗ ಪರಿಹಾರ
ಸೈತಾನನೆಂಬ ಹಳೆ ಶತ್ರುವು.
ಸರ್ವೇಶನಾಜ್ಞೆಯ ಪ್ರಕಾರ
ನನ್ನಲ್ಲಿ ಪಾಲು ಹೊಂದಲಾರನು.
ನಾ ಯೇಸು ಕ್ರೀಸ್ತ ಶಿಷ್ಯನಾದರೆ
ಮಹಾ ಸಂತೋಷದಿಂದ ತೀರುವೆ.

Go to top