Verse 1

ಕ್ರಿಸ್ತ್ಯೇಸುವಿನ ಮೃತಿಮುಖ
ನನ್ನಾತ್ಮಧ್ಯಾನವಾಗಲಿ.
ಅತುಲ್ಯವಾದಾ ಪ್ರಾಯಶ್ಚಿತ್ತ
ಯಾವಾಗ್ಯೂ ತ್ರಾಣ ಕೊಡಲಿ.
ಆತಂಗೆ ಸ್ತೋತ್ರ ಮಾಡಲಿಕ್ಕೆ
ನಂಗೆಷ್ಟಮೂಲ್ಯ ಕಾರಣ.
ಪಾಪಾದಿ ರೋಗ ನೀಗಲಿಕ್ಕೆ
ಆ ರಕ್ತ ಶ್ರೇಷ್ಠ ಔಷಧ.

Verse 2

ಶ್ರೀ ಯೇಸುವಲ್ಲಿ ಇಟ್ಟ ಧ್ಯಾನ
ನಿರಾಶೆಯಾದ ಮನಕ್ಕೆ.
ಸುಧೈರ್ಯ ನಿಜ ಸಮಾಧಾನ
ಸಂತೋಷವನ್ನೀಯುತ್ತದೆ.
ಕ್ರಿಸ್ತ್ಯೇಸು ಶಕ್ತಿ ನೀಡುವಾಗ
ಅಶಕ್ತ ನನ್ನ ಆತ್ಮಕ್ಕೆ.
ನಿರೀಕ್ಷೆ ಪಡ ಹೊಸದಾದ
ಆಧಾರ ಪ್ರಾಪ್ತವಾಗಿದೆ.

Verse 3

ಆಹಾ ನನ್ನಪರಾಧಕ್ಕಾಗಿ
ಕ್ರಿಸ್ತ್ಯೇಸು ರಕ್ತ ಚೆಲ್ಲಿದ.
ಈ ವಾರ್ತೆಯನ್ನು ಹರ್ಷವಾಗಿ
ನಾ ಮಾಡುವೆ ಸ್ವೀಕಾರವ.
ಆತುಲ್ಯ ಬುದ್ಧ್ಯತೀತ ಪ್ರೇಮ
ಅಗ್ರಾಹ್ಯ ದಿವ್ಯ ದಯವೇ
ನಿನ್ನಿಂದ ಪಾಪಿಗೆ ಸುಕ್ಷೇಮ
ಸುನೀತಿ ದೊರಕುತ್ತದೆ.

Verse 4

ದಯಾಳು ಕರ್ತ ನಿನ್ನ ಶ್ರಮೆ
ನನ್ನೊಂದೇ ನಿತ್ಯ ಗೀತವು.
ನಿನ್ನಿಂದ ಆದ ಪಾಪಕ್ಷಮೆ
ನಿನ್ನಿಂದ ಆದ ಶಾಂತಿಯು.
ನನ್ನೋಳ್ ಕೃತಜ್ಞಭಾವವನ್ನು
ಉತ್ಪಾದಿಸೋದು ಯುಕ್ತವು.
ಹೀಗಾಗುವಂತೆ ಕೃಪೆಯನ್ನು
ನೀ ಪ್ರಿಯ ಮಿತ್ರ ಪಾಲಿಸು.

Verse 5

ನಾ ಲೋಕ ಬಿಟ್ಟು ಹೋಗುವಾಗ
ನೀ ನಿನ್ನ ದಯದಲ್ಲಿಯೇ.
ನನ್ನನ್ನು ಮರೆ ಮಾಡುವಾಗ
ನಂಗೈಯ್ಯ ಭಾಗ್ಯಪೂರ್ತಿಯೇ.
ನಿನ್ನಿಂದ ಕ್ಷೇಮ ಹೊಂದಿದಾತ್ಮ
ಮತ್ತ್ಯಾತಕ್ಕಂಜುತ್ತಿರ್ವದು?
ಈ ಕಾಯ ಬಿದ್ದರೂ ನಿರ್ಭಯ
ಸುರಕ್ಷಿತಾತ್ಮಕ್ಕಿರ್ವದು.

Go to top