Verse 1

ಜೀವಕಾಂತಿಯನ್ನು ಬಿಟ್ಟ
ರಕ್ತಮಯ ಮುಖವೆ.
ಮುಳ್ಳುಮಾಲೆ ಬಿಗಿದಿಟ್ಟ
ಗಾಯವಾದ ತಲೆಯೆ
ದ್ವೇಷವೆಷ್ಟೋ ನಿಂದೆಯೆಷ್ಟೋ
ನಿನ್ನ ಮೇಲೆ ಬಂದವೆ.

Verse 2

ನೀನು ಅತ್ತ ಹೇತುವೇನು?
ನನ್ನ ದುಷ್ಟ ಪಾಪವೆ.
ಸತ್ತ ಹೇತು ನಿನ್ನಲ್ಲೇನು?
ನನ್ನ ಶಾಪಾರಾಶಿಯೇ.
ಕ್ರೂಜೆಯಲ್ಲಿ ರಕ್ತ ಚೆಲ್ಲಿ
ಜೀವ ಕೊಟ್ಟಿ ನನಗೆ.

Verse 3

ಯಾಕೆ ನಿನ್ನ ಮೇಲೆ ಕಷ್ಟ
ದುಃಖ ಶ್ರಮ ಬಿದ್ದವು?
ನಿತ್ಯನನ್ನು ಜೀವನಷ್ಟ
ಯಾಕೆ ಹಿಡುಕೊಂಡಿತು?
ನಿನ್ನ ಕಷ್ಟ ನಿನ್ನ ನಷ್ಟ
ನಂಗೆ ಮೋಕ್ಷಪ್ರಾಪ್ತಿಯು.

Verse 4

ನಿನ್ನ ಶುದ್ಧ ರಕ್ತದಿಂದ
ನನ್ನ ಪಾಪ ತೊಳೆದು.
ನಿನ್ನ ಆತ್ಮ ಶಕ್ತಿಯಿಂದ
ಅಂಧಕಾರ ಬಿಡಿಸು.
ನಿನ್ನ ನೀತಿ ನಿನ್ನ ಪ್ರೀತಿ
ನನ್ನ ನಿತ್ಯ ಸುಖವು.

Go to top