Verse 1

ಓ ದಿವ್ಯ ಕಾಂತಿಮುಖ
ಹ್ಯಾಗಾದಿ ಪಾಂಡರ.
ನಿನ್ನಲ್ಲಿ ಶೋಕ ದುಃಖ
ಆಯ್ತೆಷ್ಟೋ ಹೇರಳ.
ಸಂಕಷ್ಟ ನಿಂದೆಯಿಂದ
ಮುಚ್ಚಿರೋ ಮುಖವೆ.
ನಿಂಗಾಗಲಿ ನಮ್ಮಿಂದ
ಸಾಷ್ಟಾಂಗ ವಂದನೆ.

Verse 2

ಈ ಮುಖಪ್ರಭೆಯಿಂದ
ಸುಟ್ಟೀತು ಫಕ್ಕನೆ.
ತ್ರಿಲೋಕ ಭಯದಿಂದ
ಇಂದಾಯ್ತು ಕತ್ತಲೆ.
ಪ್ರಕಾಶ ಉಳಿದಿಲ್ಲ
ಮಿಂಚಾದ ಕಣ್ಣಿಗೆ.
ಉಜ್ಜ್ವಲ ಮಿರುಗಿಲ್ಲ
ಮೊಬ್ಬಾಯ್ತು ದೃಷ್ಟಿಗೆ.

Verse 3

ನೀ ಸೋಸಿದೆಲ್ಲ ಕಷ್ಟ
ನನ್ನಪರಾಧವೇ.
ನಿಂಗಾದ ಎಲ್ಲ ನಷ್ಟ
ನಾ ಗೈದ ಪಾಪವೇ.
ಕೋಪಾಗ್ನಿಗೆ ನಾ ಪಾತ್ರ
ಕೆಟ್ಟೋದ ಭ್ರಷ್ಟನು
ವಿಮುಕ್ತಿ ನೇನೇ ಮಾತ್ರ
ಕಟಾಕ್ಷಿಸೆನ್ನನು.

Verse 4

ಈ ನಿನ್ನ ಶ್ರಮೆಯಲ್ಲಿ
ನಾ ಸೇರ ಬಂದೆನು.
ಶ್ರೀ ಶ್ರಮೆಯೈಕ್ಯದಲ್ಲಿ
ನನ್ನನ್ನು ಸೇರಿಸು.
ಇದೆನ್ನ ಶ್ರೇಷ್ಠ ಯೋಗ
ಕಣ್ಣಿಟ್ಟು ಕ್ರೂಜೆಗೆ.
ಈ ಜೀವ ಬಿಟ್ಟು ಹೋಗ
ಸಂತೋಷವೆನಗೆ.

Verse 5

ನಾ ಸ್ತೋತ್ರ ಮಾಡುತ್ತೇನೆ
ನನ್ನಾಪ್ತ ಯೇಸುವೆ
ನಿನ್ನಾರ್ತಿ ನಿನ್ನ ಬೇನೆ
ನಾನೆಂದೂ ಮರೆಯೆ.
ನನ್ನೆಲ್ಲ ಅನುರಾಗ
ನಿನ್ನಲ್ಲಿ ಇರಲಿ.
ನನ್ನಂತ್ಯ ಬರುವಾಗ
ನಿನ್ನಲ್ಲಿ ಬರಲಿ.

Verse 6

ಅಭಯ ಕೊಡೆನ್ನಲ್ಲಿ
ನಾ ಸಾಯುತಿರಲು.
ಇರೆನ್ನ ಬಳಿಯಲ್ಲಿ
ಉಚ್ಛ್ವಾಸ ತಪ್ಪಲು.
ನಿನ್ನನ್ನು ನೋಡುತ್ತೇನೆ
ಅಮರ್ತ್ಯಚರಣ.
ನಾನಪ್ಪಿಕೊಳ್ಳುತ್ತೇನೆ
ಇದೊಳ್ಳೆ ಮರಣ.

Go to top