Verse 1

ಯೇಸು ಕ್ರಿಸ್ತನೇ
ಮೃತ್ಯಂಜಯನೇ
ನಮ್ಮ ಜೀವಜೀವವೇ
ನಿನ್ನ ಶ್ರಮೆ ನಮ್ಮ ಕ್ಷಮೆ
ಕಾಯಿ ಕಾಯಿ ನಮ್ಮನ್ನು.

Verse 2

ಕಳ್ಳನಂತೆಯೆ
ನಮ್ಮ ದಂಡನೆ
ಹೊಣೆಯಾಗಿ ತಾಳಿದೆ.
ನೀ ಪವಿತ್ರ ದಿವ್ಯ ಮಿತ್ರ
ಕಾಯಿ ಕಾಯಿ ನಮ್ಮನ್ನು.

Verse 3

ದುಷ್ಟ ಹಾಸ್ಯವು
ಮುಳ್ಳುಮಾಲೆಯು
ನಿನ್ನ ಘನವಾಯಿತು.
ನಮ್ಮ ನಿಂದೆ
ನೀನು ತಿಂದೆ
ಕಾಯಿ ಕಾಯಿ ನಮ್ಮನ್ನು.

Verse 4

ಬಡ ಪಾಪಿಗೆ
ನಿನ್ನ ಕ್ರೂಜೆಯೆ
ಜೀವವೃಕ್ಷವಾಗಿದೆ.
ನಿನ್ನ ದುಃಖ ನಮ್ಮ ಸುಖ
ಕಾಯಿ ಕಾಯಿ ನಮ್ಮನ್ನು.

Verse 5

ದಿವ್ಯ ಪ್ರೀತಿಯೇ
ದೇವಪುತ್ರನೇ
ಕನ್ಯಾಸ್ತ್ರೀಯ ಮಗುವೇ
ಜೀವದಲ್ಲು ಮೃತಿಯಲ್ಲು
ಕಾಯಿ ಕಾಯಿ ನಮ್ಮನ್ನು.

Go to top