Verse 1

ಮಹತ್ವವುಳ್ಳ ರಾಜನ
ಶಿಲುಬೆ ಶ್ರಮೆ ನೋಡಲೆ
ಈ ಲೋಕದಾಶೆ ಗರ್ವವ
ಸಂಪೂರ್ಣ ತ್ಯಾಜ್ಯ ಮಾಡುವೆ.

Verse 2

ಈ ಕ್ರೂಜೆಯಲ್ಲಿ ಅಲ್ಲದೆ
ಅನ್ಯತ್ರ ಹಿಗ್ಗಿಕೊಳ್ಳೆನು
ಪ್ರಪಂಚಭೋಗಮೋಹಕೆ
ನನ್ನಾತ್ಮ ಒಪ್ಪಲಾರದು.

Verse 3

ನೋಡೋಣ ಮುಳ್ಳುಮಾಲೆಯಂ
ಕೈ ಕಾಲು ತಲೆಯಿಂದಲು
ಬಿದ್ದ್ಹೋದ ರಕ್ತಧಾರೆಯಂ
ಹಾ ಎಂಥ ಪ್ರೀತಿಯಬ್ಧಿಯು.

Verse 4

ಈ ರಕ್ತಮೂಲವಾಗಿಯೇ
ನನ್ನಪರಾಧ ಹೋಗಿದೆ
ಈ ಶ್ರಮೆ ಗಾಯದಿಂದಲೇ
ವಿಶ್ರಾಂತಿ ಕ್ಷೇಮ ಸಿಕ್ಕಿವೆ.

Verse 5

ಭೂಪರಲೋಕ ಕೊಟ್ಟರೂ
ಈ ಪ್ರೀತಿಗೀಡು ಆಗದು
ನನ್ನಾತ್ಮ ಪ್ರಾಣ ಸರ್ವವೂ
ನಾ ಕೊಡ ತಕ್ಕ ಬಲಿಯು.

Go to top