Verse 1

ಯೇಸು ಕ್ರೂಜೆವೃಕ್ಷದಲ್ಲಿ
ತೂಗುತ್ತಿರುವಾಗಲು
ಆತ್ಮ ಮನ ಮೈಗಳಲ್ಲಿ
ದುಃಖ ತಾಳುತ್ತಿದ್ದನು.

Verse 2

ಕಳ್ಳರಲ್ಲಿ ಕಳ್ಳನೋಲು
ಕ್ರೂಜೆಯಲ್ಲಿ ಸತ್ತನು
ಹದವಾದ ಈಟಿಕೋಲು
ಪಕ್ಕೆಯಲ್ಲಿ ಚುಚಿತು.

Verse 3

ಸ್ವಲ್ಪ ಜನ ಪ್ರೀತಿಯಿಂದ
ಹತ್ರ ನಿಂತುಕೊಂಡರು
ನಿಂತು ಘೋರ ದುಃಖದಿಂದ
ಬಿಕ್ಕಿ ಅಳುತ್ತಿದ್ದರು.

Verse 4

ಮುಂಚೆ ಜ್ಞಾನವೃಕ್ಷದಿಂದ
ಮೃತ್ಯಫಲ ಹುಟ್ಟಿತು
ಈಗ ಕ್ರೂಜೆತರುವಿಂದ
ಜೀವಫಲವಹುದು.

Verse 5

ಹಗೆ ತಾಳ್ದ ಕ್ರಿಸ್ತನಲ್ಲಿ
ನಿತ್ಯ ಸ್ನೇಹಮೂಲವು
ಆತ ಪಟ್ಟ ಶ್ರಮದಲ್ಲಿ
ನಿತ್ಯ ಸುಖವಾಯಿತು.

Verse 6

ಶುಭ ವರ್ತಮಾನವನ್ನು
ಕೇಳಿ ಕ್ರೂಜೆ ದೃಷ್ಟಿಸಿ
ಆ ಮನುಷ್ಯ ಪುತ್ರನನ್ನು
ನಂಬಿ ಸ್ತೋತ್ರ ಮಾಡಿರಿ.

Go to top