Verse 1

ಆ ಕಳ್ಳ ಕ್ರೂಜೆಯಲ್ಲಿ
ತನ್ನಂತ್ಯ ಕ್ಷಣದಲ್ಲಿ
ವಿಶ್ವಾಸಿಸುತ್ತಲೇ
ಕ್ರಿಸ್ತೋಡೆಯಂಗೆ ಬಾಗಿ
ಕಟಾಕ್ಷ ಬೇಡಲಾಗಿ
ಕೃತಾರ್ಥನಾದನಲ್ಲವೇ?

Verse 2

ಅಸಹ್ಯ ಪಾಪಗಾರ
ಸಂಪೂರ್ಣ ಪರಿಹಾರ
ತಕ್ಕೊಳ್ಳಬಹುದೇ?
ಹೌದ್ಹೌದು ಕ್ರಿಸ್ತಶ್ರಮೆ
ವಿಶ್ವಾಸಿಗಳ್ಗೆ ಕ್ಷಮೆ
ಈ ಮಾತು ಹ್ಯಾಗೂ ನಿಜವೇ.

Verse 3

ಆದಾಗ್ಯೂ ಒಂದೇ ಭಯ
ಪ್ರತ್ಯಕ್ಷವಾದ ದಯ
ಆ ಒಬ್ಬ ಹೊಂದಲು
ಮತ್ತೊಬ್ಬ ಕಳ್ಳ ತೀರಿ
ಸಂರಕ್ಷಾಕಾಲ ಮೀರಿ
ಅಂತ್ಯಾಜ್ಞೆ ಹೊಂದಿ ಕೆಟ್ಟೆನು.

Verse 4

ಜಗತ್ತು ಪೂರ್ಣ ಮಾಯ
ಶ್ರೀ ಯೇಸು ನೀ ಸಹಾಯ
ಭಯಾತ್ಮ ಗೀಯಲು
ಇನ್ನ್ಯಾಕೆ ವ್ಯರ್ಥ ಭಯ?
ಸರ್ವತ್ರ ನಿನ್ನ ದಯ
ನಂಗಿರೆ ಸಾಕು ನಿತ್ಯಕು.

Go to top