Verse 1

ಓ ಲೋಕ ನೋಡು ಅಲ್ಲಿ
ಆ ಕ್ರೂಜೆವೃಕ್ಷದಲ್ಲಿ
ಅಘೋರ ನೋಟವೇ
ಆ ಕಷ್ಟದಾಳು ಯಾರು?
ಆ ನಿಂದೆದಾಸನಾರು?
ಪ್ರಶಸ್ತ ಜೀವರಾಜನೇ.

Verse 2

ಈ ದೊಡ್ಡ ಪೀಡೆಯನ್ನು
ಈ ರಕ್ತಬೆವರನ್ನು
ಚೆನ್ನಾಗಿ ದೃಷ್ಟಿಸು
ಅಗಾಧ ಶೋಕದಿಂದ
ನಿಟ್ಟುಸುರಾರ್ತಿಯಿಂದ
ಈ ಎದೆ ಭಿನ್ನವಾಯಿತು.

Verse 3

ಯಾರಿಂದ ಪೆಟ್ಟು ತಿಂದೆ?
ಈ ಕ್ರೂರವಾದ ನಿಂದೆ
ನೀನೇಕೆ ತಾಳಿದೆ?
ನೀನಪರಾಧಿಯಲ್ಲ
ನಮ್ಮಂತೆ ದುಷ್ಟನಲ್ಲ
ಪವಿತ್ರ ದೇವಪುತ್ರನೆ.

Verse 4

ನಾ ಮಳಲಷ್ಟು ಪಾಪ
ಗೈದತಿಭಾರಶಾಪ
ಹೊಂದಿರುವಾಗಲೆ
ಅಶುದ್ಧ ಪಾಪಿಗಾಗಿ
ನೀ ಶುದ್ಧ ಹೊಣೆಯಾಗಿ
ನನ್ನೆಲ್ಲ ಶಾಪ ತಾಳಿದೆ.

Verse 5

ನಿನ್ನನುಗ್ರಹಕಾಗಿ
ಏನೇನು ಪ್ರತಿಯಾಗಿ
ನಾ ಮಾಡಬಹುದು?
ನಾ ಗೈದ ಪಾಪವನ್ನು
ನೀ ಪಟ್ಟ ಶ್ರಮೆಯನ್ನು
ನಾನೆಂದು ಮರ್ತು ಬಿಡೆನು.

Go to top