Verse 1

ಇಗೋ ಮನುಷ್ಯನು
ಕಣ್ಣಲ್ಲಿ ದುಃಖಜಲ
ಮೋರೇಲಿ ಲಜ್ಜೆಯು
ತುಟೀಲಿ ಶೋಕಮಲ
ಹಣೇಲಿ ಬೆವರು
ಸಂಕಷ್ಟ ಮನದಿ
ಎದೇಲಿ ತಾಳ್ಮೆಯು
ಈ ರೂಪ ನೋಡಿರಿ.

Verse 2

ಇಗೋ ಮನುಷ್ಯನು
ತುಂಬಾಯ್ತು ಗಾಯದಿಂದ
ಶರೀರವೆಲ್ಲವು
ಈ ಶ್ರಮವೇತರಿಂದ?
ಪವಿತ್ರನೇತಕೆ
ಪ್ರಯಾಸ ಪಟ್ಟನು?
ನಮ್ಮಪರಾಧವೆ
ಆತನ್ನ ಕೊಂದಿತು.

Verse 3

ಇಗೋ ಮನುಷ್ಯನು
ನೀ ಪಟ್ಟ ಶ್ರಮೆಯನ್ನು
ನಾವೆಂದು ಮರ್ಯೆವು
ಈ ಶ್ರಮೆ ಧ್ಯಾನವನ್ನು
ನೀ ವರ್ಧಿಸ್ಯೇಸುವೆ
ನಮ್ಮನ್ನು ದೃಷ್ಟಿಸು
ನೀನೊಬ್ಬ ನಮಗೆ
ಮಧ್ಯಸ್ಥಗಾರನು.

Verse 4

ಇಗೋ ಮನುಷ್ಯನು
ನಿನ್ನಲ್ಲಿ ನಂಬುತ್ತೇವೆ
ಅನಂತ ಜೀವವು
ಕ್ರಿಸ್ತ್ಯೇಸು ನಿನ್ನ ಸೇವೆ
ನೀ ಶಾಪ ತಾಳಿದೆ
ಅಭಯವಾಯಿತು
ಸಮಾಧಿ ನಮಗೆ
ವಿಶ್ರಾಂತಿಸ್ಥಳವು.

Go to top