Verse 1

ಒಂದೇ ಮುಖ್ಯವಾದ ಆತ್ಮ ಪೋಷ
ಮಾತ್ರ ನನಗಾದರೆ.
ಇಹಲೋಕಾರಣ್ಯವಂ ಸಂತೋಷ
ಪಟ್ಟು ದಾಟಿ ಹೋಗುವೆ.
ದುಃಖಕ್ರಾಂತನಾಗಿ ತೋಟದಲ್ಲಿ
ಕ್ರೂರ ಶ್ರಮ ತಾಳ್ದ ಯೇಸುವಲ್ಲಿ
ಆತ್ಮ ದೃಷ್ಟಿ ಇಟ್ಟರೆ
ನಾನು ಮುಕ್ತನಾಗುವೆ.

Verse 2

ನೀನು ತೋರಿಸಿದ ತಾಳ್ಮೆಯನ್ನು
ನನ್ನ ಪ್ರೀಯ ಯೇಸುವೆ.
ನಿನ್ನ ರಕ್ತ ಮಯರೂಪವನ್ನು
ನಾನು ಎಂದೂ ಮರೆಯೆ.
ನೀನು ಕ್ರಯಕೆನ್ನ ಆತ್ಮಕೊಂಡು
ಕ್ರೂಜೆಯಲ್ಲಿ ಬಹು ದಾಹಗೊಂಡು
ಜೀವವಂ ವಿಸರ್ಜಿಸಿ
ತೀರಿತೆಂತ ಕೂಗಿದಿ.

Verse 3

ನನಗಾಗಿ ನೀನು ಪಟ್ಟ ಕಷ್ಟ
ಎಂದೂ ಮರ್ತು ಬಿಡೆನು.
ಘೋರ ಕತ್ತಲಲ್ಲಿ ಅಪಭ್ರಷ್ಟ
ನಾನು ಕೂತುಕೊಳ್ಳಲು.
ಅನುಗ್ರಹಗೊಂಡು ಬಲಿಯಾಗಿ
ನಿನ್ನ ರಕ್ತ ಚೆಲ್ಲಿ ನನಗಾಗಿ
ಕೊಟ್ಟಮೂಲ್ಯ ಬೆಲೆಯ
ಕೊಂಡುಕೊಂಡಿ ದಾಸನ.

Verse 4

ಇನ್ನು ನಾನು ನಿನ್ನ ದಾಸ ಯೇಸು
ಆಗಲೆನ್ನು ಪತಿಯೇ.
ನಿನ್ನ ನಾಮವೊಂದೇ ನಂಗೆ ಲೇಸು
ಅತಿ ಶ್ರೇಷ್ಠ ಮಿತ್ರನೇ.
ನಿನಗಾಗಿ ಕಾರ್ಯ ನಡಿಸೈನು
ನಿನಗಾಗಿ ಬಾಳಿ ಮಡಿದೇನು
ಜೀವವಿರ್ವ ವರೆಗೆ
ಈ ಪ್ರಮಾಣ ಸ್ಥಿರವೆ.

Go to top