Verse 1

ನೀ ಪ್ರಾರ್ಥಿಸಲ್ಕೆ ತೋಟದಲ್ಲಿ
ಪ್ರವೇಶಿಸುತ್ತಿ ಯೇಸುವೆ
ನಾ ಬಂದು ನಿನ್ನ ಬಳಿಯಲ್ಲಿ
ನಿಂತಿದ್ದು ನಿನ್ನನಗಲೆ
ನಿನ್ನಿಂದ ತಕ್ಕ ಪ್ರಾರ್ಥನೆ
ಹ್ಯಾಗೆಂದು ಕಲ್ತುಕೊಳ್ಳುವೆ.

Verse 2

ನೀ ಸಾಯುವಷ್ಟು ದುಃಖಪಟ್ಟಿ
ನೆಲಕ್ಕೆ ಬೊಗ್ಗಿ ನಡುಗಿ
ಈ ದುಃಖ ನನ್ನ ಮನ ಮುಟ್ಟಿ
ದುರಾಶೆಯೆಲ್ಲ ಕೊಲ್ಲಲಿ
ನಾನೆನ್ನ ಪಾಪವರಿತು
ಶೋಕರ್ತ ಬೊಗ್ಗಿಕೊಳ್ವೆನು.

Verse 3

ನೀ ಬಿಟ್ಟು ಎಲ್ಲ ಜನರನ್ನು
ಏಕಾಂತದಲ್ಲಿ ಬೇಡಿದಿ.
ನಿನ್ನಂತೆ ಬಿಟ್ಟು ಗದ್ದಲನ್ನು
ನಾ ಬೇಡುತ್ತೇನೇಕಾಂತದಿ
ನನ್ನೊಡನಿರೆ ಕರ್ತನು
ಮತ್ತ್ಯಾರು ಇರಬಾರದು.

Verse 4

ನೀ ಅಪ್ಪಾಎಂದು ಕೂಗಲಾಗಿ
ನಿನ್ನನ್ನು ತಂದೆ ಕೇಳ್ದನು.
ನಾ ಬೇಡಲಾತ ತಂದೆಯಾಗಿ
ಕಾರುಣ್ಯ ಮಾಡೋನೆನಗು
ನಿನ್ನಂತೆ ನಾನು ನಂಬಿಯೇ
ಕೇಳಪ್ಪಾಎಂದು ಕೂಗುವೆ.

Verse 5

ನಿನ್ನಿಚ್ಛೆ ತಂದೇಯಿಚ್ಛೆಯಲ್ಲಿ
ಅನ್ಯೋನ್ಯ ಮಾಡಿ ಬೇಡಿದಿ
ನಾನಾದ್ರೂ ಬೇಡಿಕೊಳ್ಳುವಲ್ಲಿ
ನಿನ್ನಿಷ್ಟ ತಂದೆ ಆಗಲಿ
ಹೀಗೆಂದು ನಮ್ರನಾಗಿಯೇ
ಸ್ವಚಿತ್ತ ಬಿಟ್ಟು ಬೇಡುವೆ.

Verse 6

ನಿನ್ನನ್ನು ಮರ್ತ ಶಿಷ್ಯರನ್ನು
ನೀ ಕರ್ತ ಮರ್ಯಲಿಲ್ಲವು
ಸ್ವಕಷ್ಟದಲ್ಲು ಪರರನ್ನು
ನೀ ಚಿಂತಿಸುತ್ತ ಇರಲು
ನಾ ಪರರನು ಮರೆತು
ಬೇಡೋದು ಫಲವಿಲ್ಲದು.

Verse 7

ಓ ಯೇಸು ನೀನು ಬೇಡಿದಂತೆ
ನಾ ಬೇಡಲಿಕ್ಕೆ ಬೋಧಿಸು
ಯಥಾರ್ಥವಾಗಿ ಮಗನಂತೆ
ನಾ ಬೇಡೆ ತಂದೆ ಕೇಳ್ವನು
ಹೀಗಾಗಿ ಮೋಕ್ಷ ಪಡೆದು
ಅನಂತ ಸ್ತುತಿ ಗೈವೆನು.

Go to top