Verse 1

ಏಳು ನೀ ಯೆರೂಸಲೇಮೆ
ಬೆಳಕಾಗು ಚೀಯೋನೇ.
ಮೂಡಿತಲ್ಲಾ ನಿನ್ನ ಮೇಲೆ
ದಿವ್ಯ ತಾರಾಕಾಂತೀಯೇ.
ದೂರದಿಂದ ಬಂದರು
ಮೂಡಣದ ಜನರು.

Verse 2

ಸಣ್ಣ ಬೇತ್ಲೆಹೇಮಿನಿಂದ
ಒಂದು ಹೊಸ ನಕ್ಷತ್ರ.
ಮೂಡಿ ದಿವ್ಯ ಕಾಂತಿಯಿಂದ
ದೂರ ದೇಶ ತನಕ.
ಹೊಯ್ದು ತನ್ನ ಕಿರಣ
ತಂತು ದೊಡ್ಡ ಹರುಷ.

Verse 3

ಸ್ವಲ್ಪ ಮಂದಿ ಬರುತ್ತಾರೆ
ಯೂದ ದೇಶದರಸ
ಎಲ್ಲಿಎಂದು ಕೇಳುತ್ತಾರೆ
ನೋಡಿದ್ದೇವಾ ನಕ್ಷತ್ರ.
ಭೂಮಿಯ ಸಮೂಹವೆ
ಅಡ್ಡಬೀಳು ರಾಜಗೆ.

Verse 4

ಪೂರ್ವ ದಿಕ್ಕಿನಿಂದ ಬಂತು
ನರಜಾತಿ ಚೊಚ್ಚಲು
ಲೋಕದೆಲ್ಲ ಜನರಂತು
ಸೇರುವರೀ ಬೆಳಕು.
ಬೇಗ ಬೇಗ ಬರಲಿ
ನಮ್ಮ ಯೇಸು ಆಳಲಿ.

Verse 5

ಈಗ ಕೊಂಚ ಪಾಲಿನಲ್ಲಿ
ಮಿರುಗುವ ಪ್ರಭೆಯಿಂ
ಪೂರ್ಣ ಲೋಕ ತ್ವರೆಯಲ್ಲಿ
ಶೋಭಿಸಲೀ ಬೆಳಕಿಂ.
ರಾತ್ರಿಯನ್ನು ಓಡಿಸು
ಸೂರ್ಯನೇ ಪ್ರಕಾಶಿಸು.

Go to top