Verse 1

ನೀತಿಸೂರ್ಯ ಕ್ರಿಸ್ತನು
ಲೋಕಕೆಲ್ಲ ಮೂಡಿದ್ದಾನೆ;
ಜನರೆಲ್ಲರಿಂದಲು
ಘನ ಮಾನ ಹೊಂದುತ್ತಾನೆ.
ಕ್ರಿಸ್ತ ನಿಂಗೆ ವಂದನೆ
ಮಾಡ ನಾನೂ ಬರುವೆ.

Verse 2

ನಿನ್ನ ದಾನವಾದಂಥ
ನಂಬಿಗೆಂಬ ಚಿನ್ನವನ್ನು;
ನನ್ನಿಂದಂಗೀಕರಿಸ
ಅನುಗ್ರಹಿಸೈ ನನ್ನನ್ನು.
ಕ್ರೂಜೆಯೆಂಬ ಪುಟದಿ
ಅದು ಚೊಕ್ಕವಾಗಲಿ.

Verse 3

ಮತ್ತು ಅಂಗೀಕರಿಸು
ಜಪವೆಂಬ ಧೂಪವನ್ನು;
ನಿನಗನುದಿನವು
ನಾನು ಸುಡುವೆ ಅದನ್ನು.
ನಾನು ಮೊರೆ ಇಡಲು
ಕಿವಿಗೊಟ್ಟು ಲಾಲಿಸು.

Verse 4

ಕಡೆಯಲ್ಲಿ ತರುವೆ
ಪಶ್ಚಾತ್ತಾಪಗಂಧರಸ;
ಪಾಪ ನಂಗೆ ತೋರುತ್ತೆ
ಬರೆ ನಷ್ಟ ಬರೆ ಕಸ.
ನಿನಗೆನ್ನ ಕಾಣಿಕೆ
ಇಷ್ಟವೆಂದು ಕೋರುವೆ.

Go to top